ಬೆಂಗಳೂರು;- ನಕಲಿ ವೋಟರ್ ಐಡಿ ಸೃಷ್ಟಿ ಕೇಸ್ ನಲ್ಲಿ ಬೈರತಿ ಸುರೇಶ್ ಆಪ್ತ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರು ಇದೀಗ ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಅನೇಕ ಜನರು ಬಂದು ಫೋಟೊ ತೆಗೆದುಕೊಂಡು ಹೋಗ್ತಾರೆ. ಆಸ್ಪತ್ರೆ ಬಳಿ ಹೋಗಿದ್ದೆ ಅಲ್ಲೂ ಫೋಟೋ ತೆಗೆದುಕೊಂಡ್ರು. ಒಂದು ಸಾವಿಗೆ ಹೋಗಿ ಬಂದೆ, ಫೋಟೋ ತೆಗೆಸಿಕೊಂಡ್ರು. ನೂರಾರು ಜನರ ಜೊತೆ ಫೋಟೋ ಹಿಡಿಸಿಕೊಂಡಿದ್ದೇನೆ. ಸಾವಿರಾರು ಜನರ ಜೊತೆ ಫೋಟೋ ಇದೆ. ಅವರೆಲ್ಲ ತಪ್ಪು ಮಾಡಿದ್ರೆ ನಾನು ಕಾರಣಾನಾ?” ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಪೊಲೀಸ್ ಎಲ್ಲರೂ ನಮ್ಮವರೇ. ನ್ಯಾಯಯುತ ತನಿಖೆ ನಡೆಸಲಿ. ನನಗೆ 6 ಕೋಟಿ ಜನರು ಗೊತ್ತು. ಫೋಟೋ ತೆಗೆಸಿಕೊಂಡ ಮಾತ್ರಕ್ಕೆ ನನ್ನ ಆಪ್ತರು ಅನ್ನೋದು ಸರಿಯಲ್ಲ. ನಿತ್ಯ ನೂರಾರು ಜನ ನನ್ನ ಬಳಿ ಫೋಟೋ ತೆಗೆಸಿಕೊಳ್ತಾರೆ. ಯಾರೇ ತಪ್ಪಿತಸ್ಥರು ಆಗಲಿ, ಕಾನೂನು ಇದೆ. ಅದರ ಪ್ರಕಾರ ತನಿಖೆ ಆಗಲಿ. ನನಗೆ ಬೇಕಾದವರು ಆಗಿದ್ದರೆ ಎಪ್ಐಆರ್ ಯಾಕೆ ಮಾಡಬೇಕಿತ್ತು. ಹಾಗೇ ಬಿಡಬಹುದಿತ್ತು ಅಲ್ವೆ?” ಎಂದಿದ್ದಾರೆ.
ಬೈರತಿ ಸುರೇಶ್ ಕಡೆಯವರು ಅಂದ್ರೆ ಅರೆಸ್ಟ್ ಮಾಡಬಾರದಿತ್ತು. ದೊಡ್ಡ ದೊಡ್ಡ ನಾಯಕರ ಜೊತೆ ಫೋಟೋ ತಗೋತಾರೆ. ಭಗತ್, ಮೌನೇಶ್, ರಾಘವೇಂದ್ರ ಎಲ್ಲರೂ ಪರಿಚಯದವರೇ. ಹಾಗಂತ ಅವರು ಮಾಡಿದ ತಪ್ಪಿಗೆ ನಾನು ಕಾರಣ ಆಗ್ತೀನಾ? ಪ್ರಕರಣದ ವಿಚಾರಣೆ ನಡೆಯಲಿ, ತಪ್ಪಿತಸ್ಥರಿದ್ದರೆ ಕ್ರಮ ತೆಗೆದುಕೊಳ್ಳಲಿ” ಎಂದು ಸಚಿವ ಭೈರತಿ ಸುರೇಶ್ ಹೇಳಿದ್ದಾರೆ.