ಬೆಂಗಳೂರು;- MP ಚುನಾವಣೆ ಹೊತ್ತಲ್ಲೇ ದೇಶದ ಸಾರ್ವಭತ್ವಕ್ಕೆ ಧಕ್ಕೆ ತರುವಂತಹ ಕೆಲಸ ಮಾಡ್ತಿದ್ದ ದೊಡ್ಡ ಜಾಲವನ್ನ ಸಿಸಿಬಿ ಪೊಲೀಸ್ರು ಪತ್ತೆ ಮಾಡಿದ್ದಾರೆ. ದುಡ್ಡೊಂದು ಕೊಟ್ರೆ ಯಾವೂದೇ ಐಡಿ ಫ್ರೂಫ್ ಇಲ್ಲದೇ ಆಧಾರ್ ಕಾರ್ಡ್. ವೋಟರ್ ಐಡಿ, ಡಿಎಲ್ ಎಲ್ಲಾ ಹೋಲ್ ಸೇಲ್ ರೇಟ್ ನಲ್ಲಿ ಸಿಕ್ತಿತ್ತಂತೆ. ಅದು ಈ ನಕಲಿ ಜಾಲ ನಡೆಸ್ತಿದ್ದು ಕರ್ನಾಟಕ ಸರ್ಕಾರದ ಮಂತ್ರಿ ಜೊತೆಗೆ ಸದಾ ಇರ್ತಿದ್ದ ಸಚಿವ ಭೈರತಿ ಸುರೇಶ್ ಆಪ್ತನಾಗಿರೋ ಮೌನೇಶ್ ಕುಮಾರ್ ನಡೆಸ್ತಿದ್ದ ಎಂಎಸ್ ಎಲ್ ಟೆಕ್ನೋ ಸಲುಶನ್ ಕಚೇರಿಯಲ್ಲಿ. ಹೆಬ್ಬಾಳ ಠಾಣ ವ್ಯಾಪ್ತಿಯ ಕನಕನಗರದಲ್ಲಿರೋ ಇದೇ ಕಚೇರಿ ಮೇಲೆ ನಿನ್ನೆ ಸಿಸಿಬಿ ಅಧಿಕಾಗಳು ದಾಳಿ ನಡೆಸಿ ಸಚಿವ ಸುರೇಶ್ ಜೊತೆಗ ಆಪ್ತ ಅಂತ ಗುರುತಿಸಿಕೊಂಡಿದ್ದ ಮೌನೇಶ್ ಕುಮಾರ್ ಹಾಗೂ ಭಗತ್ ಮತ್ತು ರಾಘವೇಂದ್ರ ಎಂಬುವವರನ್ನ ಬಂಧಿಸಿದ್ದಾರೆ.
ಲೋಕಸಭಾ ಚುನಾವಣಾ ಹೊತ್ತಲ್ಲಿ ಈ ರೀತಿಯ ನಕಲಿ ಆಧಾರ್ ಮತ್ತು ವೋಟರ್ ಐಡಿ ಕ್ರಿಯೇಟ್ ಮಾಡೋ ಜಾಲ ಪತ್ತೆಯಾಗಿರೋದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಮಾಹಿತಿಗಳ ಪ್ರಕರಣ ಮೌನೇಶ್ ಸಂಪರ್ಕ ಮಾಡಿ ಯಾವೂದೇ ಕ್ಷೇತ್ರ ವೋಟರ್ ಐಡಿ ಅಥವಾ ಯಾವೂದೇ ವಿಳಾಸದ ಆಧಾರ್ ಕಾರ್ಡ್ ಕೇಳಿದ್ರೆ ಕ್ಷಣ ಮಾತ್ರದಲ್ಲಿ ಮಾಡಿಕೊಡ್ತಿದ್ರಂತೆ. ಅಷ್ಟೇ ಅಲ್ಲ ಬೇರಡಯವರ ಗುರುತಿನ ಚೀಟಿಗೆ ಇನ್ಯಾರದ್ದೋ ಫೋಟೋ ಹಾಕಿ ಐಡಿ ಕ್ರಿಯೇಟ್ ಮಾಡಿರೋ ಆರೋಪ ಕೇಳಿ ಬಂದಿದೆ. ಸದ್ಯ ಹೆಬ್ಬಾಳ ಪೊಲೀಸ್ರು ಈ ಬಗ್ಗೆ ತನಿಖೆ ನಡೆಸ್ತಿದ್ದು, ಕಂಪ್ಯೂಟರ್ ಗಳು ಕೆಲ ಆಧಾರ್ ಕಾರ್ಡ್ ಮತ್ತು ವೋಟರ್ ಕಾರ್ಡ್ ಹಾಗೂ ಕಾರ್ಡ್ ತಯಾರು ಮಾಡುವ ಕಚ್ಚಾ ವಸ್ತುಗಳನ್ನ ಪೊಲೀಸ್ರು ಸೀಜ್ ಮಾಡಿದ್ದಾರೆ.ಇಂತಹ ಕಾನೂನು ಬಾಹಿರ ಕೃತ್ಯ ನಡೆಸಲೇ ಸಚಿವರ ಆಪ್ತ ಅಂತ ಗುರುತಿಸಿಕೊಂಡಿದ್ದಾರ. ಇಲ್ಲ ಇವರ ಹಿಂದೆ ಕಾಣದ ಕೈಗಳು ನಿಂತು ಕೆಲಸ ಮಾಡಿಸ್ತಿದ್ಯಾ ಅನ್ನೋದು ತನಿಖೆಯಿಂದಾಷ್ಟೆ ಗೊತ್ತಾಗಬೇಕಿದೆ.