ಎಲ್ಲದಕ್ಕೂ ಸಮಯ ಕೂಡಿ ಬರಬೇಕು: ಬಿ. ವೈ. ವಿಜಯೇಂದ್ರ

ವಿಜಯಪುರರಾಜ್ಯದಲ್ಲಿ ನೂರು ರಾಮಮಂದಿರ ಪುನಶ್ಚೇಚೇತನ ಮಾಡುವ ಸರಕಾರದ ತೀರ್ಮಾನವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಸ್ವಾಗತಿಸಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮನ ಅಸ್ತಿತ್ವವನ್ನು ಪ್ರಶ್ನೆ ಮಾಡುತ್ತಿರುವ ಕಾಂಗ್ರೆಸ್ ರಾಮಮಂದಿರ ಪುನಶ್ಚೇತನಕ್ಕೆ ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಒಳ್ಳೆಯ ಕೆಲಸ ಮಾಡುತ್ತಿರುವವರಿಗೆ ನಾವು ಹಾರೈಸುತ್ತೇವೆ. ಭಗವಾನ್ ರಾಮನನ್ನು ಅವರು ಒಪ್ಪಿಕೊಂಡಿರುವುದು ತುಂಬಾ ಸಂತೋಷಕರ ಸಂಗತಿಯಾಗಿದೆ ಎಂದು ಹೇಳಿದರು.

ಇನ್ನೂ ಕಾಯಕಯೋಗಿ ಸಿದ್ಧಗಂಗಾ ಮಠದ ಹಿಂದಿನ ಪೀಠಾಧ್ಯಕ್ಷ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ಪುರಸ್ಕಾರ ನೀಡಲು ಕಾಲ ಕೂಡಿ ಬರಬೇಕು, ಹಿಂದಿನಿಂದಲೂ ಈ ಕುರಿತು ಚರ್ಚೆ ನಡೆಯುತ್ತದೆ. ಎಲ್ಲದಕ್ಕೂ ಸಮಯ ಕೂಡಿ ಬರಬೇಕು. ಮುಂಬರುವ ದಿನಗಳಲ್ಲಿ ಒಳ್ಳೆಯದಾಗುತ್ತದೆ ಎಂದರು.

 

 

Loading

Leave a Reply

Your email address will not be published. Required fields are marked *