ಬೆಂಗಳೂರು : ಹಾದಿ ಬೀದಿಯಲ್ಲಿ ಹೋಗೋರಿಗೆಲ್ಲ ಗ್ಯಾರೆಂಟಿ ಸ್ಕೀಂ ಕೊಡಲ್ಲ’ ಎಂಬ ಡಿಸಿಎಂ ಡಿಕೆಶಿ ಹೇಳಿಕೆಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಈಶ್ವರಪ್ಪ ಡಿಸಿಎಂ ಡಿಕೆಶಿ ಹೇಳಿಕೆಗೆ ಕಿಡಿಕಾಡಿದ್ದಾರೆ.
ಸಿದ್ದರಾಯ್ಯ, ಡಿಕೆಶಿ ಚುನಾವಣೆ ವೇಳೆ ಗ್ಯಾರಂಟಿಯ ಭರವಸೆ ಕೊಟ್ಟಿದ್ದರು. ನಂತರ ಮೊದಲ ಸಂಪುಟದಲ್ಲೇ ಗ್ಯಾರಂಟಿ ಸ್ಕೀಂ ನೀಡುವ ಭರವಸೆ ನೀಡಿದ್ದರು. ಆದರೆ ಈಗ ಹಾದಿ ಬೀದಿಯಲ್ಲಿ ಹೋಗೋರಿಗೆಲ್ಲ ಗ್ಯಾರೆಂಟಿ ಸ್ಕೀಂ ಕೊಡಲ್ಲ’ ಎನ್ನುತ್ತಿದ್ದಾರೆ. ಮತದಾರರ ಕಾಲಿಗೆ ಬಿದ್ದು ಸಿಎಂ, ಡಿಸಿಎಂ ಆಗಿದ್ದಾರೆ. ಈಗ ಹಾದಿ ಬೀದಿಗೆ ಹೋಗುವವರಿಗೆ ಕೊಡಲ್ಲ ಎಂದಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.