ಚಿಕ್ಕಬಳ್ಳಾಪುರ: ಕಾಲೇಜು ಹಾಸ್ಟೆಲ್ ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಸ್ಫದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ. ಮೂಲತಃ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಲ್ದೂರು ಗ್ರಾಮದ 21 ವರ್ಷದ ಪ್ರೀತಿ ಸಾವನ್ನಪ್ಪಿರುವ ವಿದ್ಯಾರ್ಥಿನಿ. ಅಂದಹಾಗೆ ಇಂದು ಕಾಲೇಜಿನ ವಸತಿನಿಲಯದ ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪ್ರೀತಿ ಪತ್ತೆಯಾಗಿದ್ದು… ಕೂಡಲೇ ಕಾಲೇಜು ಆಡಳಿತ ಮಂಡಳಿ ಸಿಬ್ಬಂದಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ಆದಾಗಲೇ ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ವೈದ್ಯರು ತಿಳಸಿದ್ದಾರೆ. ಮೃತದೇಹವನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಕಾಲೇಜು ಆಡಳಿತ ಮಂಡಳಿಯವರು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಕಾರಣ ತಿಳಿದುಬಂದಿಲ್ಲ ಎನ್ನುತ್ತಿದ್ದಾರೆ. ಇತ್ತ ಮೃತಳ ಪೋಷಕರು ಸಹ ಏನಾಗಿದೆ ಎಂಬುದು ನಮಗೂ ಗೊತ್ತಿಲ್ಲ ಕಾಲೇಜಿನವರು ನಿಮ್ಮ ಮಗಳಿಗೆ ತುಂಬಾ ಹುಷಾರಿಲ್ಲ ಬೇಗ ಬನ್ನಿ ಅಂತ ಹೇಳಿದ್ರು . ನಾವ್ ಬಂದಾದ ಮೇಲೆ ಮೃತಪಟ್ಟಿದ್ದಾಳೆ ಎನ್ನುತ್ತಿದ್ದಾರೆ ಅಂತ ತಿಳಿಸಿದರು ಅಂತಾರೆ. ಸದ್ಯ ವಿಜಯಪುರ ಪೊಲೀಸ್ ಠಾಣೆಗೆ ಮೃತಳ ತಂದೆ ಹೋಗಿ ದೂರು ನೀಡಲು ಮುಂದಾಗಿದ್ದಾರೆ.