ಶಿವಮೊಗ್ಗ: ಇಂದಿನಿಂದ ಬೆಂಗಳೂರು-ಶಿವಮೊಗ್ಗ ವಿಮಾನಯಾನ ಆರಂಭ ಹಿನ್ನೆಲೆ ಮೊದಲ ವಿಮಾನದಲ್ಲಿ ಬಿಎಸ್ ಯಡಿಯೂರಪ್ಪ, ಸಚಿವ ಎಂ.ಬಿ.ಪಾಟೀಲ್ ಪ್ರಯಾಣಿಸಿದ್ದಾರೆ. ಹೌದು ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ಗುರುವಾರ ಆಗಮಿಸಿದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳಿದ ಇಂಡಿಗೋ ವಿಮಾನದಲ್ಲಿ ಮಾಜಿ ಸಿಎಂ ಯಡಿಯೂರಪ್ಪ , ಸಚಿವ ಎಂಬಿ ಪಾಟೀಲ್ ಜೊತೆ ಆ ಭಾಗದ ಜನ ಪ್ರತಿನಿಧಿಗಳು ಪ್ರಯಾಣಿಸಿದ್ದರು.
ಶಿವಮೊಗ್ಗದ ವಿಮಾನ ನಿಲ್ದಾಣದಿಂದ ಇಂದಿನಿಂದ ಪ್ರಯಾಣ ಆರಂಭವಾಗಿದೆ. ಶಿವಮೊಗ್ಗದಲ್ಲಿ ಇಳಿದ ಮೊದಲ ವಿಮಾನಕ್ಕೆ ವಾಟರ್ ಸೆಲ್ಯೂಟ್ ಮೂಲಕ ಸ್ವಾಗತ ಮಾಡಲಾಯಿತು. ವಿಮಾನದಲ್ಲಿ ಆಗಮಿಸಿದ ಗಣ್ಯರನ್ನು ಸಚಿವ ಮಧು ಬಂಗಾರಪ್ಪ ಹಾಗೂ ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಸ್ವಾಗತಿಸಿದರು.