ಚಾಮರಾಜನಗರ;- ಸರ್ಕಾರಿ ಸೇವೆಗಳನ್ನು ನೌಕರರು ಉತ್ತಮವಾಗಿ ನಿರ್ವಹಿಸುತ್ತಾ ಬಂದಿದ್ದಾರೆ ಎಂದು ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ಸೇವೆಗಳನ್ನು ನೌಕರರು ಉತ್ತಮವಾಗಿ ನಿರ್ವಹಿಸುತ್ತಾ ಬಂದಿದ್ದಾರೆ. ಜೊತೆಗೆ ನೌಕರರ ಮಕ್ಕಳ ಹೆಚ್ಚಿನ ವಿದ್ಯಾಭಾಸಕ್ಕೆ ಸಂಘದ ವತಿಯಿಂದ ಅನುಕೂಲಗಳನ್ನು ಮಾಡಲಾಗುತ್ತಿದೆ ವಿದ್ಯಾರ್ಥಿಗಳನ್ನು ಪ್ರೋತಾಹಿಸುವ ನಿಟ್ಟಿನಿಂದ ೨೦೨೦ನೇ ವರ್ಷದಿಂದ ನಗದು ಪ್ರತಿಭಾ ಪುರಸ್ಕಾರ ೬೦೦೦ ರಾಜ್ಯದ ಸರ್ಕಾರಿ ನೌಕರರ ಮಕ್ಕಳಿಗೆ ನೀಡುತ್ತಾ ಬಂದಿದ್ದೇವೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಜಿಲ್ಲಾ ಘಟಕದ ವತಿಯಿಂದ ಚಾಮರಾಜನಗರ ಜಿಲ್ಲೆಯ ನೂತನ ಶಾಸಕರು, ಸಚಿವರಿಗೆ ಹಾಗೂ ಸರ್ಕಾರಿ ನೌಕರರ ಪ್ರತಿಭಾವಂತ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರವನ್ನು ನೀಡಿ ಅವರು ಮಾತನಾಡಿದರು.
ಸಂಘನೆಗಳು ಜಿಲ್ಲೆಯಲ್ಲಿ ೧೩೮ ವಿದ್ಯಾರ್ಥಿಗಳು ೯೦ ಗಿಂತ ಹೆಚ್ಚು ಅಂಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಅಂತಹ ಮಕ್ಕಳನ್ನು ಗುರುತಿಸುವುದು ನಮ್ಮೆಲ್ಲರ ಕರ್ತವ್ಯ. ಒಂದು ಸಂಘವನ್ನು ಬೆಳೆಸುವುದು ಬಹಳ ಕಷ್ಟದ ಕೆಲಸ ರಾಜ್ಯದಲ್ಲಿಯೇ ಕರ್ನಾಟಕ ಸರ್ಕಾರಿ ನೌಕರರ ಸಂಘವು ನೌಕರರಿಗೆ ಅನುಕೂಲಗಳನ್ನು ಮಾಡುತ್ತ ಬಂದಿದೆ ವಿದ್ಯಾರ್ಥಿಗಳು ನಿಮಗೆ ಉತ್ತೇಜನ ನೀಡುವ ತಂದೆ, ತಾಯಿಯನ್ನು ಮರೆಯ ಬಾರದು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ೭ನೇ ವೇತನ ಆಯೋಗವನ್ನು ಕೊಡಿಸುವ ನಿಟ್ಟಿನಲ್ಲಿ ಸಂಘವು ಶ್ರಮಿಸುತ್ತಿದೆ. ಈ ಸಂಘವು ೧೦೨ವರ್ಷಗಳಿಂದ ನೌಕರರ ಅಭಿವೃದ್ದಿಗೆ ಹೋರಾಟವನ್ನು ಮಾಡುತ್ತಲೇ ಬಂದಿದೆ. ಪ್ರತಿವರ್ಷವು ನೌಕರರು ನೀಡುವ ೨೦೦ರೂ ನಾಲ್ಕು ವರ್ಷದಲ್ಲಿ ೨೭ ಕೋಟಿರೂ ಉಳಿಸಲು ಕಾರಣವಾಗಿದೆ ಪ್ರತಿಯೊಬ್ಬ ಸದಸ್ಯರು ಸಂಘಟನೆಯನ್ನು ನಮ್ಮ ಕುಟುಂಬವೆಂದು ತಿಳಿಯಬೇಕು ಶಿಕ್ಷಕ ಸಂಘ ಬೇರೆಯಲ್ಲಿ ಅದುವೇ ಸರ್ಕಾರಿ ಸಂಘದ ಒಂದು ಭಾಗ ಎಲ್ಲರೂ ಜೊತೆಯಾಗಿ ಸಂಘದ ಕೆಲಸಗಳನ್ನು ಮಾಡಬೇಕು ಎಂದು ಹೇಳಿದರು.