ಚಾಮರಾಜನಗರ: ವಿದ್ಯುತ್ ಸ್ಪರ್ಶದಿಂದ ಒಂಟಿಸಲಗ ಸಾವನ್ನಪ್ಪಿರುವ ಘಟನೆ ನಡೆದಿದೆ. ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮದ ಕುರುಬರಹುಂಡಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಈ ಘನಟೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯ ಕುರುಬರಹುಂಡಿ ಗ್ರಾಮದ ರೈತರ ಜಮೀನಿನಲ್ಲಿ ವಿದ್ಯುತ್ ಸ್ಪರ್ಶದಿಂದ ಒಂಟಿ ಸಲಗ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತ ಯೋಜನೆಯ ಓಂಕಾರ್ ಅರಣ್ಯ ವಲಯದ ಕಾಡಂಚಿನಲ್ಲಿ ಕುರುಬರಹುಂಡಿ ಗ್ರಾಮದ ವಾಸಿ ರೈತ
ಕೆ.ಎಸ. ಶಿವರಾಜು ಎಂಬುವರ ಜಮೀನಿನಲ್ಲಿ ಈ ದುರ್ಘಟನೆ ನಡೆದಿದೆ. ರೈತ ಕೆ.ಎಸ್.ಶಿವರಾಜು ಎಂಬ ರೈತ ಕಡಲೆಕಾಯಿ ಜಮೀನನಿಗೆ ಬೆಳೆ ಕಾಪಾಡಲು ವಿದ್ಯುತ್ ಹಾಯಿಸಿದ್ದ ಎನ್ನಲಾಗಿದೆ. ಆದರೆ ಮೇವನ್ನು ಅರಸಿಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಓಂಕಾರ ಅರಣ್ಯ ವಲಯದಿಂದ ಬಂದಂತಹ ಒಂಟಿ ಸಲಗ ಜಮೀನಿನಲ್ಲಿನ ವಿದ್ಯುತ್ ಗೆ ಭಾನುವಾರ ತಡ ರಾತ್ರಿ ಸಿಲುಕಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ . ಮುಂಜಾನೆ ರೈತ ಕೆ.ಎಸ.ಶಿವರಾಜು ಜಮೀನು ಸುತ್ತಾ ಹಂದಿಗಳ ಸಂಚಾರವಿದಿಯಾ ಎಂದು ಪರಿಶೀಲನೆ ನಡೆಸುವ ವೇಳೆಗೆ ಆನೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.