ವಿದ್ಯುತ್ ಕಳವು ಪ್ರಕರಣ- ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು!?

ಹಾಸನ :- ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮನೆಗೆ ಅಕ್ರಮವಾಗಿ ವಿದ್ಯುತ್ ಪಡೆದ ಪ್ರಕರಣ ಸಂಬಂಧ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ‘ನಮ್ಮಿಂದ್ರ ಆ ರೀತಿಯ ತಪ್ಪೇನಾದರೂ ಆಗಿದ್ದರೆ ರಾಜ್ಯದ ಜನರಿಗೆ ಕ್ಷಮೆ ಕೇಳುತ್ತೇನೆ ಎಂದು ಜೆಡಿಎಸ್ ಯುವ ನಾಯಕ ನಿಖಿಲ್‌ ಕುಮಾರಸ್ವಾಮಿ ಹೇಳಿದರು ಬೆಂಗಳೂರಿನ ಜೆಪಿ ನಗರದಲ್ಲಿರುವ ಮಾಜಿ ಮುಖ್ಯಮಂತ್ರಿ HD ಕುಮಾರಸ್ವಾಮಿ ಅವರ ನಿವಾಸದ ದೀಪಾಲಂಕಾರಕ್ಕಾಗಿ ಅಕ್ರಮವಾಗಿ ವಿದ್ಯುತ್ ಪಡೆದ ಪ್ರಕರಣ ‘ನಮ್ಮಿಂದ್ರ ಆ ರೀತಿಯ ತಪ್ಪೇನಾದರೂ ಆಗಿದ್ದರೆ ರಾಜ್ಯದ ಜನರಿಗೆ ಕ್ಷಮೆ ಕೇಳುತ್ತೇನೆ. ನಮ್ಮ ಮನೆಯ ಕೆಲ ಹುಡುಗರು ತಪ್ಪು ಮಾಡಿರಬಹುದು ಎಂದು ಹೇಳಿದರು.

ಇನ್ನು ಇದೇ ವೇಳೆ ‘ಪ್ರತಿ ವರ್ಷ 9 ರಿಂದ 15 ದಿನ ಹಾಸನಾಂಬೆ ದರ್ಶನ ಸಿಗುತ್ತದೆ. ಈ ಬಾರಿ ಪ್ರತಿ ದಿನ ದಿನಕ್ಕೆ ಒಂದರಿಂದ ಒಂದೂವರೆ ಲಕ್ಷ ಭಕ್ತರು ದರ್ಶನ ಪಡೆದಿದ್ದು, ಶಾಸಕರು, ಜಿಲ್ಲಾಡಳಿತ ಜವಾಬ್ದಾರಿಯಿಂದ ವ್ಯವಸ್ಥೆ ‌ಮಾಡಿದ್ದಾರೆ. ರಾಜ್ಯದಲ್ಲೇ ಹಾಸನಾಂಬೆ ‌ತಾಯಿಯ ಶಕ್ತಿ ಬಗ್ಗೆ ಚರ್ಚೆ ಆಗುತ್ತಿರುತ್ತದೆ. ಹಚ್ಚಿದ ದೀಪ‌ ಒಂದು ವರ್ಷದವರೆಗೆ ಇರುತ್ತದೆ ಎಂಬ ನಂಬಿಕೆ ಇದೆ. ಎಲ್ಲರಿಗೂ ಒಳ್ಳೆಯದಾಗಲಿ, ಮಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ರೈತರ ಪರವಾಗಿ ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ದೇವಿಯ ಬಳಿ ಬೇಡಿದ್ದೇನೆ. ನಾನು ಜನಸೇವೆಯನ್ನೇ ದೇವರ ಸೇವೆ ಎಂದುಕೊಂಡಿದ್ದೇನೆ. ಸಿನಿಮಾ ರಂಗದಲ್ಲೂ ಪ್ರತಿ ದಿನ ಶೂಟಿಂಗ್ ಮುಂಚೆ ಕ್ಯಾಮೆರಾಕ್ಕೆ ನಮಸ್ಕಾರ ‌ಮಾಡುವ ಸಂಸ್ಕ್ರತಿ ಹೊಂದಿದ್ದೇನೆ ಎಂದರು.

Loading

Leave a Reply

Your email address will not be published. Required fields are marked *