ಅರುಣಾಚಲಪ್ರದೇಶದಲ್ಲಿ ಭೂಕಂಪ: 4.0 ತೀವ್ರತೆ ದಾಖಲು

ಅರುಣಾಚಲಪ್ರದೇಶ: ಅರುಣಾಚಲಪ್ರದೇಶದಲ್ಲಿ ಭೂಕಂಪ(Earthquake) ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದೆ. ಅರುಣಾಚಲ ಪ್ರದೇಶದ ಸಿಯಾಂಗ್ನ ಉತ್ತರಕ್ಕೆ ಭೂಕಂಪ ಸಂಭವಿಸಿದೆ. ಇಲ್ಲಿಯವರೆಗೆ ಭೂಕಂಪದಿಂದ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಅರುಣಾಚಲಪ್ರದೇಶದ ಸಿಯಾಂಗ್ ಜಿಲ್ಲೆಯ ಪ್ಯಾಂಗಿನ್ ಬಳಿ ಭೂಕಂಪ ಸಂಭವಿಸಿದೆ, ಎನ್ಸಿಎಸ್ ಪ್ರಕಾರ ಭೂಕಂಪವು 10 ಕಿ.ಮೀ ಆಳದಲ್ಲಿ ಸಂಭವಿಸಿದೆ. ಇದಕ್ಕೂ ಮುನ್ನ ಜುಲೈ 22 ರಂದು ಅರುಣಾಚಲಪ್ರದೇಶದ ತವಾಂಗ್ನಲ್ಲಿ 3.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಭೂಕಂಪ ಬೆಳಗ್ಗೆ 6.56ಕ್ಕೆ 5 ಕಿ.ಮೀ ಆಳದಲ್ಲಿ ಅಪ್ಪಳಿಸಿತ್ತು.

Loading

Leave a Reply

Your email address will not be published. Required fields are marked *