ಲಕ್ನೋ: ಲಕ್ನೋದಲ್ಲಿ ತಮ್ಮ ಮನೆಯೊಳಗೆ ಮಿತಿಮೀರಿದ ಚಾರ್ಜ್‌ನಿಂದ ಇ-ರಿಕ್ಷಾ ಬ್ಯಾಟರಿ ಸ್ಫೋಟಗೊಂಡು ಕುಟುಂಬದ ಮಹಿಳೆ, ಆಕೆಯ ಮಗ ಮತ್ತು ಸೊಸೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಇನ್ನೂ ಇಬ್ಬರಿಗೆ ಸುಟ್ಟ ಗಾಯಗಳಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುರುವಾರ ಮುಂಜಾನೆ 5 ಗಂಟೆಗೆ ಬಿಬಿಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಇ-ರಿಕ್ಷಾವೊಂದರ ಬ್ಯಾಟರಿಯು ಓವರ್‌ಚಾರ್ಜ್‌ನಿಂದ ಸ್ಫೋಟಗೊಂಡಿತು ಎಂದು ಪೂರ್ವ ಡಿಸಿಪಿ ಹಿರ್ದೇಶ್ ಕುಮಾರ್ ತಿಳಿಸಿದ್ದಾರೆ.
ಸ್ಫೋಟದ ಸದ್ದು ಕೇಳಿದ ಬಳಿಕ ಮನೆಯೊಳಗೆ ಧಾವಿಸಿದ ಅಂಕಿತ್‌ಗೆ ಸುಟ್ಟ ಗಾಯಗಳೊಂದಿಗೆ ನೆಲದ ಮೇಲೆ ಬಿದ್ದಿದ್ದ ತನ್ನ ಸೊಸೆ ಮತ್ತು ಮಕ್ಕಳೊಂದಿಗೆ ತನ್ನ ಹೆಂಡತಿಯನ್ನು ಕಂಡು ಕೂಡಲೇ ಅವರನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಚಿನ್ಹಾಟ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ, ಅಂಕಿತ್ ಅವರ ಪತ್ನಿ ರೇಣು, ಅವರ ಮಗ ಕುಂಜ್ ಮತ್ತು ಸೊಸೆ ರಿಯಾ ಚಿಕಿತ್ಸೆ ಸಮಯದಲ್ಲಿ ಸಾವನ್ನಪ್ಪಿದ್ದಾರೆ.