ಮಳೆಯಿಲ್ಲದ ಪರಿಣಾಮ ಬಿತ್ತನೆ ಕಾರ್ಯದಲ್ಲಿ ಎದುರಾಗಲಿದೆ ಸಂಕಷ್ಟ

ಜುಲೈ ತಿಂಗಳಲ್ಲಿ ಸುರಿದ ಮುಂಗಾರು ಮಳೆಯಿಂದಾಗಿ ರಾಜ್ಯದಲ್ಲಿ ಬಿತ್ತನೆ ಕಾರ್ಯ ಸ್ವಲ್ಪ ಮಟ್ಟಿಗೆ ಚುರುಕಾಗಿತ್ತು. ಹೀಗಾಗಿ, ಶೇ.69ರಷ್ಟು ಬಿತ್ತನೆಯಾಗಿದೆ. ಆದರೆ, ಆ ನಂತರ ಮಳೆಯಿಲ್ಲದ ಪರಿಣಾಮ ಬಿತ್ತನೆ ಕಾರ್ಯ ನಡೆಯಲಿಲ್ಲ. ಜತೆಗೆ, ಈಗಾಗಲೇ ಬಿತ್ತಿರುವ ಬೆಳೆಗೆ ಮಳೆಯಿಲ್ಲದೆ ಕೃಷಿ ಉತ್ಪನ್ನಗಳ ಉತ್ಪಾದನೆ ಮೇಲೆ ಭಾರೀ ಹೊಡೆತ ಬೀಳುವ ಸಂಭವ ಎದುರಾಗಿದೆ.
ಕಳೆದ ವರ್ಷ ಈ ವೇಳೆಗೆ 63.41 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ ಪೂರ್ಣಗೊಂಡಿತ್ತು. ಆದರೆ, ಈ ಬಾರಿ 56.70 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ (ಗುರಿ 82 ಲಕ್ಷ ಹೆಕ್ಟೇರ್). ಈ ವಾರದಲ್ಲಿ ಮಳೆಯಾದರೆ ಬಿತ್ತನೆ ಪ್ರಮಾಣ ಸ್ವಲ್ಪ ಏರಬಹುದು. ಒಂದು ವೇಳೆ ಮಳೆಯಾಗದಿದ್ದರೆ ಕೋಲಾರ ಮತ್ತಿತರ ಭಾಗಗಳಲ್ಲಿ ಬಿತ್ತಿರುವ ಬೆಳೆಗೂ ಸಂಕಷ್ಟ ಎದುರಾಗಲಿದೆ.
ಬೆಂಗಳೂರು ನಗರ, ಕೋಲಾರ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಬಿತ್ತನೆ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿಆಗಿಲ್ಲ. ಹೀಗಾಗಿ, ಆ ಭಾಗದ ಜನರು ತೀವ್ರ ಆತಂಕದಲ್ಲಿದ್ದಾರೆ. ಇನ್ನು ಬೀದರ್, ಉತ್ತರ ಕನ್ನಡ, ಹಾವೇರಿ, ವಿಜಯನಗರ ಮತ್ತಿತರ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದ್ದರೂ ಸಕಾಲದಲ್ಲಿ ಮಳೆಯಾಗಲಿಲ್ಲ. ನಂತರ ಅತಿವೃಷ್ಟಿಯಿಂದಾಗಿ ಬಿತ್ತನೆಯಾಗಿರುವ ಬೆಳೆ ಮೊಳಕೆಯೊಡೆಯುವ ಮೊದಲೇ ಹಾಳಾಯಿತು.

Loading

Leave a Reply

Your email address will not be published. Required fields are marked *