ಮಳೆ ಬೀಳದ ಕಾರಣ ರೈತರು ಬಿತ್ತಿದ ಭತ್ತ ಈಗ ಒಣಗುವ ಪರಿಸ್ಥಿತಿಯಲ್ಲಿ..! ಅನ್ನದಾತ ಕಂಗಾಲು

ಜುಲೈ ತಿಂಗಳ ಮಧ್ಯಭಾಗದಲ್ಲಿಆರ್ಭಟಿಸಿದ್ದ ಮಳೆ ಆಗಸ್ಟ್‌ ತಿಂಗಳಲ್ಲಿ ಮಾಯವಾಗಿದೆ. ಆಗಸ್ಟ್‌ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳದ ಕಾರಣ ರೈತರು ಬಿತ್ತಿದ ಭತ್ತ ಹಾಗೂ ಇತರೆ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಪ್ರಮುಖ ಬೆಳೆಯಾದ ಭತ್ತ ಹೊಡೆ ಹಿರಿಯುವ ಸಮಯದಲ್ಲೇ ಮಳೆ ಕೈಕೊಟ್ಟಿದ್ದರಿಂದ ಅನ್ನದಾತರು ಆತಂಕದಲ್ಲಿದ್ದಾರೆ.

ಕಳೆದ ಎರಡು ದಶಕಗಳ ಈ ಭಾಗದ ಮಳೆಯ ಪ್ರಮಾಣವನ್ನು ಅವಲೋಕಿಸಿದಾಗ ಪ್ರತಿ ವರ್ಷದ ಜೂನ್‌ ತಿಂಗಳಿನಲ್ಲಿ ವಾರ್ಷಿಕ ಸರಾಸರಿ ಮಳೆಯ ಪ್ರಮಾಣದ ಪೈಕಿ ಶೇ. 20 ರಷ್ಟು ಮಳೆ ಬೀಳುತ್ತದೆ. ಆದರೆ, ಈ ವರ್ಷ ಜೂನ್‌ ತಿಂಗಳಲ್ಲಿ ಮಳೆ ಮಾಯವಾಗಿತ್ತು.

ಜುಲೈ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಉತ್ತಮ ಬೆಳೆಯ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ, ನಂತರದ ದಿನಗಳಲ್ಲಿಮಳೆ ಕೈಕೊಟ್ಟಿದ್ದರಿಂದ ಬೆಳೆಹಾನಿಯ ಆತಂಕ ಎದುರಿಸುವಂತಾಗಿದೆ. ಮುಂದಿನ ಒಂದು ವಾರದ ಅವಧಿಯಲ್ಲಿಮಳೆ ಸುರಿಯದಿದ್ದರೆ ಬಿತ್ತಿರುವ ಬೀಜದಷ್ಟೂ ಬೆಳೆ ಕೈಗೆಟುಕದ ಸನ್ನಿವೇಶ ನಿರ್ಮಾಣವಾಗಲಿದೆ’

 

Loading

Leave a Reply

Your email address will not be published. Required fields are marked *