ಕುಡಿದ ಅಮಲಿನಲ್ಲಿ ಬಾರ್ ನಲ್ಲಿ ಕಿರುತೆರೆ ನಟನ ಕಿರಿಕ್: ನಟ ಪ್ರಜ್ವಲ್ ಮೇಲೆ FIR

ಸಾರ್ವಜನಿಕರ ಜೀವನದಲ್ಲಿ ಗುರುತಿಸಿಕೊಂಡವರು ಕೊಂಚ ಮೈ ಮರೆತರು ಅದು ದೊಡ್ಡ ಸುದ್ದಿಯಾಗುತ್ತದೆ. ಸದ್ಯ ಸದ್ಯ ಕನ್ನಡದ ಕಿರುತೆರೆ ನಟ ಪ್ರಜ್ವಲ್ ಬಾರ್ ನಲ್ಲಿ ಕಿರಿಕ್ ಮಾಡಿಕೊಂಡಿದ್ದು ಆತನ ವಿರುದ್ಧ ಇದೀಗ ಎಫ್ ಐ ಆರ್ ದಾಖಲಾಗಿದೆ.
ಕನ್ನಡದ ಕೆಲವು ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಘಳಿಸಿರುವ ನಟ ಪ್ರಜ್ವಲ್ ಬಾರ್ನಲ್ಲಿ ಉಂಟಾದ ಕಿರಿಕ್ ನಿಂದಾಗಿ ಹೆಸರು ಕೆಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಟನ ವಿರುದ್ಧ ಆರ್ಆರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಆಗಿದೆ.
‘ಅಮೃತವರ್ಷಿಣಿ’ ಹಾಗೂ ‘ಅಣ್ಣ ತಂಗಿ’ ಧಾರಾವಾಹಿ ಮೂಲಕ ಪ್ರಜ್ವಲ್ ಖ್ಯಾತಿ ಘಳಿಸಿದ್ದು, ಮೂರು ದಿನದ ಹಿಂದೆ ನಡೆದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಚೇತನ್ ಎಂಬುವರ ಜೊತೆ ಪ್ರಜ್ವಲ್ ಆರ್ಆರ್ ನಗರದ ‘ಅಮೃತ ಬಾರ್ ಆ್ಯಂಡ್ ರೆಸ್ಟೋರೆಂಟ್’ನಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ.
ಪ್ರಜ್ವಲ್ ತಮ್ಮ ಸ್ನೇಹಿತರ ಜೊತೆ ಅಮೃತ ಬಾರ್ಗೆ ಹೋಗಿದ್ದರು. ಇದೇ ಬಾರ್ಗೆ ಚೇತನ್ ಕೂಡ ತನ್ನ ಸ್ನೇಹಿತರ ಜೊತೆ ಬಂದಿದ್ದರು. ಈ ವೇಳೆ ಪ್ರಜ್ವಲ್ನ ಸ್ನೇಹಿತ ಮನು ಎಂಬುವವರನ್ನು ಚೇತನ್ ಕರೆದಿದ್ದಾರೆ. ಇದರಿಂದ ಅಲ್ಲಿಯೇ ಇದ್ದ ಪ್ರಜ್ವಲ್ ಅವರು ಚೇತನ್ ಮೇಲೆ ಹಲ್ಲೆ ಮಾಡಿದ್ದಾರೆ.
ಮರದ ಪೀಸ್ನಿಂದ ಚೇತನ್ ಹಾಗೂ ಸ್ನೇಹಿತರ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದ ಆರೋಪವನ್ನು ಚೇತನ್ ನಟ ಪ್ರಜ್ವಲ್ ಮಾಡಿದ್ದಾರೆ. ಬಾರ್ನಲ್ಲಿ ಅಷ್ಟೇ ಅಲ್ಲದೆ ರಸ್ತೆಯಲ್ಲಿ ಈ ಗುಂಪು ಮತ್ತೆ ಗಲಾಟೆ ಮಾಡಿಕೊಂಡಿದೆ. ಅಮೃತ ಬಾರ್ನಲ್ಲಿ ಗಲಾಟೆ ಆದ ಬಳಿಕ ಚೇತನ್ ಸ್ನೇಹಿತರ ಮೇಲೆ ಪ್ರಜ್ವಲ್ ಮತ್ತೆ ಹಲ್ಲೆ ಮಾಡಿದ್ದಾಗಿ ಆರೋಪಿಸಿ ದೂರು ದಾಖಲಾಗಿದೆ. ಸದ್ಯ ಚೇತನ್ ಕೊಟ್ಟು ದೂರಿನನ್ವಯ ಎಫ್ಐಆರ್ ದಾಖಲು ಮಾಡಿಕೊಂಡು ಪೊಲೀಸರು ನೊಟೀಸ್ ನೀಡಿದ್ದಾರೆ. ಇದರ ಜೊತೆಗೆ ಬಾರ್ನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಹ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Loading

Leave a Reply

Your email address will not be published. Required fields are marked *