ಬೆಂಗಳೂರು:- ಮಾಗಡಿ ರಸ್ತೆಯ ವಿರೇಶ್ ಥಿಯೇಟರ್ ಮುಂಭಾಗದ ರಸ್ತೆಯಲ್ಲಿ ಚಾಲಕನ ನಿಯಂತ್ರಣಕ್ಕೆ ಸಿಗದೇ ಡಿವೈಡರ್ ಮೇಲೆ ಥಾರ್ ಜೀಪ್ ಹತ್ತಿದ ಘಟನೆ ಜರುಗಿದೆ.
ಕಾಮಾಕ್ಷಿಪಾಳ್ಯ ಮಾರ್ಗವಾಗಿ ಮಾಗಡಿರೋಡ್ ಗೆ ಥಾರ್ ಜೀಪ್ ಚಾಲಕ ಬರುತ್ತಿದ್ದ. ಈ ವೇಳೆ ರಸ್ತೆ ಡೌನ್ ಇದ್ದು, ಕಾರು ನಿಯಂತ್ರಣಕ್ಕೆ ಸಿಗದಿದ್ದಾಗ ಡಿವೈಡರ್ ಮೇಲೆ ಹತ್ತಿಸಿದ್ದಾನೆ. ಬೆಳಗ್ಗೆ 7:05 ರ ಸುಮಾರಿ ಘಟನೆ ನಡೆದಿದೆ.
ಸ್ಥಳಕ್ಕೆ ವಿಜಯನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಇಲ್ಲ. ಬೆಳಗ್ಗೆ ಟ್ರಾಫಿಕ್ ಮೂಮೆಂಟ್ ಕಡಿಮೆ ಇದ್ದಿದ್ದರಿಂದ ಯಾವುದೇ ಅಪಘಾತವಾಗಿಲ್ಲ ಎನ್ನಲಾಗಿದೆ.