ಟ್ರಕ್ ಡ್ರೈವರ್ ಕಂಪಾರ್ಟ್ ಮೆಂಟ್ ಗಳಲ್ಲಿ ಹವಾನಿಯಂತ್ರಿತ ಕಡ್ಡಾಯ: ನಿತಿನ್ ಗಡ್ಕರಿ

ನವದೆಹಲಿ: ಟ್ರಕ್ ಗಳಲ್ಲಿ  ಹವಾನಿಯಂತ್ರಿತ ಡ್ರೈವರ್ ಕ್ಯಾಬಿನ್ಗಳನ್ನು ಕಡ್ಡಾಯಗೊಳಿಸುವ ಕ್ರಮವನ್ನು ಶೀಘ್ರವೇ ಕೈಗೊಳ್ಳಲಾಗುವುದು. ವಾಹನ ತಯಾರಕರು ಹವಾನಿಯಂತ್ರಿತ ಡ್ರೈವರ್ ಕ್ಯಾಬಿನ್ಗಳನ್ನು ಅಳವಡಿಸಬೇಕಾಗುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಆಟೋ ಉದ್ಯಮದ ಸಮಾರಂಭವೊಂದರಲ್ಲಿ ಮಾತನಾಡಿದ ಸಚಿವರು, ಟ್ರಕ್ ಡ್ರೈವರ್ ಕಂಪಾರ್ಟ್ಮೆಂಟ್ಗಳಲ್ಲಿ ಹವಾನಿಯಂತ್ರಿತ (ಎಸಿ) ಕಡ್ಡಾಯಗೊಳಿಸುವ ಕಡತಕ್ಕೆ ಸಹಿ ಹಾಕಿದ್ದೇನೆ. ಟ್ರಕ್ಗಳನ್ನು ಓಡಿಸುವ ಚಾಲಕರು ಈ ಕ್ರಮವನ್ನು ಒಪ್ಪಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ನಮ್ಮ ಚಾಲಕರು 43-47% ರಷ್ಟು ಕಠಿಣ ತಾಪಮಾನದಲ್ಲಿ ವಾಹನಗಳನ್ನು ಚಲಾಯಿಸುತ್ತಾರೆ. ಆಗ ಚಾಲಕರ ಸ್ಥಿತಿ ಹೇಗಿರುತ್ತದೆ ಎಂಬುದನ್ನು ನಾವು ಊಹಿಸಬೇಕು. ನಾನು ಸಚಿವನಾದ ನಂತರ ಎಸಿ ಕ್ಯಾಬಿನ್ ಪರಿಚಯಿಸಲು ಉತ್ಸುಕನಾಗಿದ್ದೆ. ಆಗ ಟ್ರಕ್ಗಳ ಬೆಲೆ ಹೆಚ್ಚಾಗುತ್ತದೆ ಎಂದು ಕೆಲವರು ಇದನ್ನು ವಿರೋಧಿಸಿದ್ದರು. ಈಗ ನಾನು ಡ್ರೈವರ್ ಕ್ಯಾಬಿನ್ಗಳಲ್ಲಿ ಎಸಿ ಕಡ್ಡಾಯಗೊಳಿಸುವ ಕಡತಕ್ಕೆ ಸಹಿ ಹಾಕಿದ್ದೇನೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಭಾರತದಲ್ಲಿ ಚಾಲಕರ ಕೊರತೆಯಿದೆ. ಇದರ ಪರಿಣಾಮವಾಗಿ ಈಗ ಇರುವ ಚಾಲಕರು ದಿನದಲ್ಲಿ 14-16 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಇತರ ದೇಶಗಳಲ್ಲಿ, ಟ್ರಕ್ ಚಾಲಕರು ಇಷ್ಟು ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುವುದಕ್ಕೆ ನಿರ್ಬಂಧವಿದೆ ಎಂದು ಮಾಹಿತಿ ನೀಡಿದ್ದಾರೆ. ಎಸಿ ಡ್ರೈವರ್ ಕ್ಯಾಬಿನ್ ಹೊಂದಿರುವ ಟ್ರಕ್ಗಳನ್ನು ಯಾವಾಗ ಹೊರತರಲಾಗುತ್ತದೆ ಎಂಬ ಬಗ್ಗೆ ಸಚಿವರು ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ 2025 ರಿಂದ ಇದನ್ನು ಪರಿಚಯಿಸಲಾಗುವುದು ಎಂದು ವರದಿಗಳಾಗಿವೆ.

Loading

Leave a Reply

Your email address will not be published. Required fields are marked *