ನಮಗೆ ರುಚಿ ನೀಡುವಂತಹ ಆಹಾರ ಪದಾರ್ಥಗಳು ಬೇಕು. ಯಾವುದು ತುಂಬಾ ರುಚಿಯಾಗಿ ಇರುತ್ತದೋ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹಿಂದಿನವರು ಹೇಳುತ್ತಿದ್ದರು. ಅದೇ ರೀತಿಯ ಪ್ರತಿಯೊಂದು ತರಕಾರಿಗಳಲ್ಲೂ ಅದರದ್ದೇ ಆಗಿರುವಂತಹ ಕೆಲವೊಂದು ಆರೋಗ್ಯ ಗುಣಗಳು ಇವೆ. ಇದರಿಂದ ದಿನಕ್ಕೊಂದು ರೀತಿಯ ತರಕಾರಿ ಸೇವಿಸಿದರೆ ಅದರಿಂದ ನಮ್ಮ ಆರೋಗ್ಯವು ಚೆನ್ನಾಗಿರುವುದು. ಈ ಲೇಖನದಲ್ಲಿ ನಾವು ನಿಮಗೆ ಬೆಂಡೆಕಾಯಿ ಬಗ್ಗೆ ತಿಳಿಸಲಿದ್ದೇವೆ. ಬೆಂಡೆಕಾಯಿಯನ್ನು ಕತ್ತರಿಸಿಕೊಂಡು ಅದನ್ನು ರಾತ್ರಿ ವೇಳೆ ನೀರಿಗೆ ಹಾಕಿಟ್ಟು ಬೆಳಗ್ಗೆ ಕುಡಿದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ.
ಬೆಂಡೆಕಾಯಿಯಲ್ಲಿ ಇರುವಂತಹ ನಾರಿನಾಂಶವು ಗ್ಯಾಸಿನಿಂದ ಉಂಟಾಗುವ ಸಮಸ್ಯೆಯನ್ನು ನಿವಾರಿಸಬಲ್ಲದು. ಇದು ಗ್ಯಾಸ್, ಹೊಟ್ಟೆಯುಬ್ಬರ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.
ಬೆಂಡೆಕಾಯಿಯು ನಿಮ್ಮ ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾವನ್ನು ಉತ್ಪತ್ತಿ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ಅಂಶವು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.
ಬೆಂಡೆಕಾಯಿಯನ್ನು ಬೇಯಿಸಿ ಅಥವಾ ಹಸಿಯಾಗಿಯೇ ತಿಂದರೆ ಅದರಲ್ಲಿರುವ ನಾರಿನಾಂಶವು ದೇಹದಲ್ಲಿನ ರಕ್ತದಂಶವನ್ನು ನಿಯಂತ್ರಣದಲ್ಲಿಡುತ್ತದೆ.
ಬೆಂಡೆಕಾಯಿಯಲ್ಲಿ ವಿಟಮಿನ್ ಎ, ಲುಟೈನ್, ಕ್ಸಂಟೈನ್ ಮತ್ತು ಬೆಟಾ ಕ್ಯಾರೋಟಿನ್ ಅಂಶಗಳಿವೆ. ಇದು ಕಣ್ಣಿನ ದೃಷ್ಟಿಗೆ ತುಂಬಾ ಒಳ್ಳೆಯದು.
ಬೆಂಡೆಕಾಯಿಯು ತೂಕ ಕಳೆದುಕೊಳ್ಳಲು ಸಹಕಾರಿ. ಇದರಲ್ಲಿ ತುಂಬಾ ಕಡಿಮೆ ಮಟ್ಟದ ಕ್ಯಾಲೋರಿಗಳಿವೆ. ಇದರಲ್ಲಿ ಯಾವುದೇ ರೀತಿಯ ಸಂಸ್ಕರಿತ ಕೊಬ್ಬು ಅಥವಾ ಕೊಲೆಸ್ಟ್ರಾಲ್ ಇಲ್ಲ.
ದೇಹದಲ್ಲಿರುವ ವಿಷಕಾರಿ ಅಂಶಗಳು ಹಾಗೂ ಕೊಲೆಸ್ಟ್ರಾಲ್ ನ್ನು ಬೆಂಡೆಕಾಯಿಯು ಹೊರಹಾಕುತ್ತದೆ. ನಿಮಗೆ ಬೆಂಡೆಕಾಯಿ ಇಷ್ಟವಿಲ್ಲದೆ ಇದ್ದರೆ ನೆನೆಸಿದ ಬೆಂಡೆಕಾಯಿಯ ನೀರನ್ನು ಕುಡಿಯಿರಿ.
ಪುರಾತನ ಕಾಲದಲ್ಲಿ ಭಾರತದಲ್ಲಿ ಐಬಿಎಸ್ ಮತ್ತು ಅಲ್ಸರ್ ಕಾಯಿಲೆ ಗುಣಪಡಿಸಲು ಬೆಂಡೆಕಾಯಿಯನ್ನು ಉಪಯೋಗಿಸುತ್ತಿದ್ದರು. ಇದನ್ನು ಔಷಧಿಯಾಗಿಯೂ ಉಪಯೋಗಿಸಿಕೊಳ್ಳಬಹುದು.
ದೇಹದಲ್ಲಿರುವ ವಿಷಕಾರಿ ಅಂಶಗಳು ಹಾಗೂ ಕೊಲೆಸ್ಟ್ರಾಲ್ನ್ನು ಬೆಂಡೆಕಾಯಿಯು ಹೊರಹಾಕುತ್ತದೆ. ನಿಮಗೆ ಬೆಂಡೆಕಾಯಿ ಇಷ್ಟವಿಲ್ಲದೆ ಇದ್ದರೆ ನೆನೆಸಿದ ಬೆಂಡೆಕಾಯಿಯ ನೀರನ್ನು ಕುಡಿಯಿರಿ.
ಪುರಾತನ ಕಾಲದಲ್ಲಿ ಭಾರತದಲ್ಲಿ ಐಬಿಎಸ್ ಮತ್ತು ಅಲ್ಸರ್ ಕಾಯಿಲೆ ಗುಣಪಡಿಸಲು ಬೆಂಡೆಕಾಯಿಯನ್ನು ಉಪಯೋಗಿಸುತ್ತಿದ್ದರು. ಇದನ್ನು ಔಷಧಿಯಾಗಿಯೂ ಉಪಯೋಗಿಸಿಕೊಳ್ಳಬಹುದು.
ಬೆಂಡೆಯಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿಗಳು ಮತ್ತು ಹೆಚ್ಚಿನ ಪ್ರಮಾಣದ ಕರಗದ ನಾರು ಇದೆ. ಈ ನಾರನ್ನು ಕಗರಿಸುವ ಪ್ರಯತ್ನದಲ್ಲಿ ಕೊಂಚ ಪ್ರಮಾಣದ ಕೊಬ್ಬು ವ್ಯರ್ಥವಾಗಿ ಹೋಗುವುದರಿಂದ ತೂಕ ಸಹಜವಾಗಿ ಕಡಿಮೆಯಾಗುತ್ತದೆ.
ಬೆಂಡೆಯಲ್ಲಿಯೂ ಉತ್ತಮ ಪ್ರಮಾಣದ ವಿಟಮಿನ್ ಸಿ ಇದೆ. ಇದು ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಬೆಂಡೆಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಹಲವು ವಿಧದ ಕಾಯಿಲೆಗಳಿಂದ ದೇಹವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ.