ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಈಗಾಗಲೆ ಹೊಸ ಸರ್ಕಾರ ಬಂದ ನಂತ್ರ ಹಳೆಯ ತಾತ್ಕಾಲಿಕ ನೇಮಕಾತಿಗಳು ರದ್ದಾಗುತ್ತವೆ ಎಂಬುದಾಗಿ ಸ್ಪಷ್ಟಪಡಿಸಿದ್ದರು. ಅದರಂತೆ ಪ್ರವೀಣ್ ನೆಟ್ಟಾರು ಪತ್ನಿಗೆ ನೀಡಲಾಗಿದ್ದಂತ ತಾತ್ಕಾಲಿಕ ಹುದ್ದೆ ರದ್ದಾಗಿದೆ ಎಂದು ತಿಳಿಸಿದ್ದರು.
ಇದೇ ಮಾತರನ್ನು ಇಂದು ಉಲ್ಲೇಖಿಸಿರುವಂತ ಸಚಿವ ದಿನೇಶ್ ಗುಂಡೂರಾವ್, ಬಿಜೆಪಿಯವರ ಜ್ಞಾನದ ಮಟ್ಟದ ಬಗ್ಗೆಯೇ ಅನುಮಾವಿದೆ ಎಂದು ವ್ಯಂಗ್ಯವಾಡಿದ್ದಾರೆ.
ಈ ಕುರಿತಂತೆ ಇಂದು ಟ್ವಿಟ್ ಮಾಡಿರುವಂತ ಅವರು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹಿಂದಿನ ಸರ್ಕಾರದ ತಾತ್ಕಾಲಿಕ ನೇಮಕಾತಿಗಳು ರದ್ದಾಗುವುದು ಸಹಜ. ನೆಟ್ಟಾರು ಪತ್ನಿಯ ಉದ್ಯೋಗ ರದ್ದಾಗಿರುವುದು ಇದೇ ಕಾರಣಕ್ಕೆ. ಇದು BJPಯವರಿಗೆ ಅರ್ಥವಾಗದಿದ್ದರೆ ಅವರ ಜ್ಞಾನದ ಮಟ್ಟದ ಬಗ್ಗೆಯೇ ಅನುಮಾನವಿದೆ ಎಂಬುದಾಗಿ ಸಚಿವ ದಿನೇಶ್ ಗುಂಡೂರಾವ್ ವಾಗ್ಧಾಳಿ ನಡೆಸಿದ್ದಾರೆ.