ಬೆಂಗಳೂರು;- ಜಿಕಾ ವೈರಸ್ ಪಾಸಿಟಿವ್ ಬಂದರು ಹೆಚ್ಚು ಆತಂಕ ಬೇಡ ಎಂದು ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಚಿಕ್ಕಬಳ್ಳಾಪುರದ ಮೂರು ಭಾಗದಲ್ಲಿ ಒಂದು ಸೊಳ್ಳೆಯ ಪೂಲ್ ನಲ್ಲಿ ಝೀಕಾ ಪತ್ತೆಯಾಗಿದೆ. ಎನ್ಐವಿ ಪುಣೆಯಿಂದ ಪತ್ತೆಯಾಗಿದೆ. ಮೂರು ಗ್ರಾಮ ವ್ಯಾಪ್ತಿಯಲ್ಲಿ ಈಗಾಗಲೇ ಅಧಿಕಾರಿಗಳು ತೀವ್ರ ಎಚ್ಚರಿಕೆ ವಹಿಸಿದ್ದಾರೆ
ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್ ಮಾತನಾಡಿ, ರಾಜ್ಯಾದ್ಯಂತ ಝಿಕಾ ವೈರಸ್ ಪತ್ತೆಗಾಗಿ ಸ್ಯಾಂಪಲ್ಸ್ ಟೆಸ್ಟ್ ಮಾಡಲಿದ್ದೇವೆ. ಹೊಸದಾಗಿ ಶೀಘ್ರದಲ್ಲಿ ಇದಕ್ಕಾಗಿ ಗೈಡ್ ಲೈನ್ಸ್ ಹೊರಡಿಸಲಿದ್ದೇವೆ. ಡೆಂಘೀ ರೀತಿಯಲ್ಲಿ ತುಂಬಾ ಗಂಭೀರ ಸ್ವರೂಪವಿಲ್ಲ. ಮರಣದ ಪ್ರಮಾಣದ ಕಡಿಮೆ ಇರುತ್ತದೆ. ಆದರೆ ಗರ್ಭಿಣಿಯರು ಎಚ್ಚರಿಕೆ ವಹಿಸಬೇಕು. ಮಗುವಿನ ಬ್ರೈನ್ ಬೆಳವಣಿಗೆಗೆ ತೊಂದರೆಯಾಗಲಿದೆ. ಈ ಜಿಕಾ ವೈರಸ್ ಪಾಸಿಟಿವ್ ಬಂದರು ತೀರಾ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಜ್ವರ ಬಂದವರ ಸ್ಯಾಂಪಲ್ಸ್ಗಳನ್ನು ಈಗಾಗಲೇ ಪುಣೆಗೆ ಕಳಿಸಲಾಗಿದೆ. ನೀರು ಇರುವ ಕಡೆ ಸೊಳ್ಳೆ ಉತ್ಪತ್ತಿಯಾಗುತ್ತದೆ. ಗರ್ಭಿಣಿಯರ ಪ್ರತ್ಯೇಕ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಮೂವರ ವರದಿ ಬರಬೇಕಾಗಿದೆ. ಅದರಲ್ಲಿ ಒಬ್ಬರು ಇವತ್ತು ಡಿಸ್ಜಾರ್ಜ್ ಆಗುತ್ತಾರೆ. ಇನ್ನಿಬ್ಬರು ಮೊನ್ನೆಯೇ ಡಿಸ್ಜಾರ್ಜ್ ಆಗಿದ್ದಾರೆ ಎಂದಿದ್ದಾರೆ