ಬಳ್ಳಾರಿ: ರಾಜಕೀಯ ಕುತಂತ್ರದಿಂದ ಬಳ್ಳಾರಿಯಿಂದ (Bellary) ಹೊರಗೆ ಕಳಿಸಿದ್ರು. ಯಾರನ್ನು ನಾನು ಬೆಳೆಸಿದ್ದೇನೋ ಅವರೇ ನನಗೆ ಮೋಸ ಮಾಡಿದ್ರು ಎಂದು ಗಾಲಿ ಜನಾರ್ದನ ರೆಡ್ಡಿ (Janardhan Reddy) ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಮೋಸ ಮಾಡಿದವರನ್ನು ಕಳೆದ ಚುನಾವಣೆಯಲ್ಲಿ ಜನರು ಸೋಲಿಸಿದ್ರು ಎಂದು ಪರೋಕ್ಷವಾಗಿ ಶ್ರೀರಾಮುಲು (Sriramulu), ಸೋಮಶೇಖರ್ ರೆಡ್ಡಿ (Somashekhar Reddy) ವಿರುದ್ಧ ವಾಗ್ದಾಳಿ ನಡೆಸಿದರು.
ಪತ್ನಿಯನ್ನು ರಾಣಿ ಚೆನ್ನಮ್ಮಗೆ ಹೊಲಿಸೋ ಮೂಲಕ ಚುನಾವಣೆ ಹೋರಾಟದ ಬಗ್ಗೆ ವಿವರಣೆ ನೀಡಿದ ರೆಡ್ಡಿ, ನನ್ನ ಪತ್ನಿ ಲಕ್ಷ್ಮಿ ಅರುಣಾ ಸೋಲಿಸಲು ಹೋಗಿ ಈಗ ಮನೆಯಲ್ಲಿ ಕುಳಿತಿದ್ದಾರೆ. ನಮ್ಮವರೇ ವಿರೋಧಿಗಳ ಜೊತೆಗೆ ಸೇರಿ ನಮ್ಮನ್ನು ಸೋಲಿಸಿದರು. ಬಳ್ಳಾರಿಯಲ್ಲಿ ಗೆದ್ದಿರೋ ಹುಡುಗ, ನಮ್ಮ ಪಕ್ಷದವರು ಯಾವುದಾದರೂ ಕಚೇರಿಗೆ ಬಂದ್ರೆ ಕೆಲಸ ಮಾಡಬೇಡಿ ಎಂದು ಹೇಳುತ್ತಿದ್ದಾರೆ. ಇದು ಸರಿಯಲ್ಲ ಅಂದ್ರು.
ಇದೆ ವೇಳೆ ಜನಾರ್ದನ ರೆಡ್ಡಿ ಮಾಡಿದ ಕಾರ್ಯ ಮುಂದುವರಿಸಿಕೊಂಡು ಬಳ್ಳಾರಿ ನಾಯಕರಿಗೆ ಹೋಗಲು ಮನವಿ ಮಾಡಿಕೊಂಡರು. ಬಳ್ಳಾರಿ ಅಭಿವೃದ್ಧಿ ಮಾಡಿ ಇಲ್ಲವಾದ್ರೆ ಕೆಆರ್‍ಪಿ ಪಕ್ಷದ ವತಿಯಿಂದ ಹೋರಾಟ ಮಾಡುತ್ತೇವೆ. ಕೆಆರ್‍ಪಿ ಪಕ್ಷದ ಕಾರ್ಯಕರ್ತರಿಗೆ ಕಿರುಕುಳ ತೊಂದರೆ ಕೊಟ್ರೆ ಸುಮ್ಮನೆ ಇರೋ ಮಾತೇ ಇಲ್ಲ. ನಮ್ಮ ಕಾರ್ಯಕರ್ತರ ತಂಟೆಗೆ ಬಂದ್ರೆ ಸುಮ್ಮನಿರಲ್ಲ. ಕಾರ್ಯಕರ್ತರಿಗೆ ಬೆದರಿಕೆ ಹಾಕಿದರೆ ವಿಧಾನ ಸೌಧದ ಒಳಗೆ ಹೊರಗೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.