ನವದೆಹಲಿ: ನಾನು ‘ಮೋದಿ ಜೀ’ ಅಲ್ಲ, ನಾನು ಮೋದಿ (Narendra Modi) ಅಷ್ಟೇ. ಹೀಗಾಗಿ ಮೋದಿ ಜೀ (Modi ji) ಎಂದು ಕರೆಯುವ ಮೂಲಕ ಸಾರ್ವಜನಿಕರಿಂದ ನನ್ನನ್ನು ದೂರ ಮಾಡಬೇಡಿ ಎಂದು ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ.
ಬಿಜೆಪಿ (BJP) ಸಂಸದೀಯ ಪಕ್ಷದ ಸಭೆಯಲ್ಲಿ ಈ ಕುರಿತು ಪ್ರಸ್ತಾಪ ಮಾಡಿದ ಪ್ರಧಾನಿಯವರು ದಯವಿಟ್ಟು ಮೋದಿ ಜೀ ಎಂದು ಕರೆಯಬೇಡಿ ಅಂತ ಸಂಸದರನ್ನು ಕೇಳಿಕೊಂಡರು.ಇದರಿಂದ ದೇಶದ ಜನ ಹಾಗೂ ನನ್ನ ನಡುವೆ ಅಂತರ ಇರುವಂತೆ ನನಗೆ ಕಾಡುತ್ತದೆ. ಹೀಗಾಗಿ ನನ್ನನ್ನು ಮೋದಿ ಎಂದಷ್ಟೇ ಕರೆಯಿರಿ ಅಂದ್ರು.
ಪ್ರಧಾನಿ ಮೋದಿ ಅವರು ಪಕ್ಷದ ಸಾಮಾನ್ಯ ಕಾರ್ಯಕರ್ತ ಮತ್ತು ಜನಸಾಮಾನ್ಯರಂತೆ ಇರಲು ಬಯಸುತ್ತಾರೆ. ಹೀಗಾಗಿ ತಮ್ಮ ಕುಟುಂಬದ ಭಾಗವೆಂದು ಪರಿಗಣಿಸುವಂತೆ ಹೇಳುತ್ತಾರೆ. ಇತರೆ ಸಂಸದರಂತೆ ಮೋದಿಯೂ ಕೂಡ ಒಬ್ಬ ಸಂಸದರು ಎಂಬಂತೆ ಭಾವಿಸಬೇಕು ಎಂದು ಅವರು ನಂಬುತ್ತಾರೆ ಎಂದು ಸಭೆಯಲ್ಲಿದ್ದ ಸಂಸದರೊಬ್ಬರು ಮಾಧ್ಯಮಕ್ಕೆ ತಿಳಿಸಿದರು.