ಜೇನು ತುಪ್ಪ ಸೇವನೆಯಿಂದ ಆರೋಗ್ಯಕ್ಕೆ ಆಗುವ ಲಾಭಗಳೇನು ಗೊತ್ತಾ..?

ಜೇನು ತುಪ್ಪ ಎಂದು ಹೆಸರು ಎತ್ತಿದರೆ ಸಾಕು ನಮಗೆ ಅರಿವಿಲ್ಲದೆಯೇ ಬಾಯಲ್ಲಿ ನೀರೂರಲು ಆರಂಭವಾಗುತ್ತದೆ.. ಅಲ್ವಾ. ಸಕ್ಕರೆಯ ಸವಿಯನ್ನು ನೀಡಬಲ್ಲ ಜೇನು ನೈವೇದ್ಯ ಸಮಾನ. ಇನ್ನು ಜೇನುತುಪ್ಪದಲ್ಲಿ ನೈಸರ್ಗಿಕವಾದ ಸಕ್ಕರೆಯ ಅಂಶವಿರುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು ಜೊತೆಗೆ ವಿಟಮಿನ್ ಬಿ ಹಾಗೂ ಮಿನರಲ್ಸ್ ಗಳು, ಕ್ಯಾಲ್ಸಿಯಂ ಹಾಗೂ ಹೇರಳವಾಗಿವುದರಿಂದ ನಮ್ಮ ದೇಹದ ಮೇಲೆ ಈ ಜೇನುತುಪ್ಪವು ಧನಾತ್ಮಕವಾದ ಪರಿಣಾಮವನ್ನು ಬೀರುತ್ತದೆ.

ಹಾಗಾಂತ ಹೇಳಿ ಇದು ಅರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಹೆಚ್ಚು ಹೆಚ್ಚು ಸೇವಿಸುವಂತಿಲ್ಲ. ಬದಲಿಗೆ ದಿನಕ್ಕೆ ಕೇವಲ ಒಂದರಿಂದ ಎರಡು ಚಮಚದಷ್ಟು ಮಾತ್ರ ಹಣ್ಣಿನೊಂದಿಗೆ ಅಥವಾ ನೇರವಾಗಿ ಈ ತುಪ್ಪವನ್ನು ಸೇವಿಸಬೇಕು.ಮುಖ್ಯವಾದ ವಿಚಾರ ಏನೆಂದರೆ ಈ ಜೇನುತುಪ್ಪ ವನ್ನು ಬೇಸಿಗೆ ಕಾಲದಲ್ಲಿ ತೆಗೆದುಕೊಂಡರೆ ದೇಹದ ಉಷ್ಣತೆ ಯು ಹೆಚ್ಚಿ ಪ್ರತಿಕೂಲ ಪರಿಣಾಮವನ್ನು ಬೀರಬಹುದು.

ಉಪಯೋಗಗಳು

  • ಜೇನುತುಪ್ಪ ನೂರಾರು ಉಪಯೋಗಗಳನ್ನು ಒಳಗೊಂಡಿದೆ.
  • ಕೂದಲಿನ ಬೆಳವಣಿಗೆಗೆ ಪೂರಕವಾಗಿದೆ ಹಾಗೂ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.
  • ಜೊತೆಗೆ ನಮ್ಮ ಚರ್ಮವನ್ನು ಸಂರಕ್ಷಿಸುವುದರ ಜೊತೆಗೆ ಚರ್ಮಕ್ಕೆ ಕಾಂತಿಯನ್ನು ಒದಗಿಸುತ್ತದೆ.
  • ಇನ್ನೂ ಕೆಲವರು ಬಾಯಿಹುಣ್ಣಿನಿಂದ ನರಳುತ್ತಿರುತ್ತಾರೆ. ಅಂತವರಿಗೆ ಈ ಜೇನುತುಪ್ಪವು ರಾಮಬಾಣವಾಗಿ ಸಹಕರಿಸುತ್ತದೆ.
  • ಜೇನುತುಪ್ಪದ ಒಂದು ಮುಖ್ಯ ಉಪಯೋಗ ಏನೆಂದರೆ ಈ ಜೇನಿಗೆ ಗಾಯವನ್ನು ಗುಣಪಡಿಸುವ ಸಾಮರ್ಥ್ಯವಿದೆ.ಹಾಗಾಗಿ ಬಾಯಿಹುಣ್ಣು ಆದ ಸಂದರ್ಭದಲ್ಲಿ ನಾಲ್ಕು ಚಮಚದಷ್ಟು ಜೇನು ತುಪ್ಪವನ್ನು ಬಾಯಿಯಲ್ಲಿ ಹಾಕಿ ಇಟ್ಟುಕೊಂಡರೆ ಬಾಯಿ ಹುಣ್ಣು ತಕ್ಷಣವೇ ವಾಸಿಯಾಗುತ್ತದೆ. ಅಥವಾ ನೆಲ್ಲಿಕಾಯಿ ಪುಡಿಯನ್ನು ಈ ಜೇನುತುಪ್ಪ ದೊಂದಿಗೆ ಸೇರಿಸಿ ಲೇಪದಂತೆ ಹಚ್ಚಿಕೊಂಡರೆ ಬಾಯಿ ಹುಣ್ಣು ತಕ್ಷಣವೇ ವಾಸಿಯಾಗುತ್ತದೆ.
  • ಜೊತೆಗೆ ಬೊಜ್ಜು ಕರಗಿಸಲು ಕೂಡ ಸಹಾಯವಾಗುತ್ತದೆ.ತಣ್ಣನೆಯ ನೀರಿಗೆ ಒಂದೆರಡು ಚಮಚ ಜೇನು ಹನಿ ಬೆರೆಸಿ ಪ್ರತಿನಿತ್ಯ ಸೇವಿಸಿದರೆ ನಿಮ್ಮ ಬೊಜ್ಜು ಸುಲಭವಾಗಿ ಕರಗಿ ಹೋಗುತ್ತದೆ.
  • ಅಲ್ಲದೇ ಶುಂಠಿಯನ್ನು ಜೇನುತುಪ್ಪದೊಂದಿಗೆ ಜಜ್ಜಿ ಸೇವಿಸಿದರೆ ಪದೇ ಪದೇ ಉಂಟಾಗುವ ಕಫ, ಕೆಮ್ಮು, ಹಾಗೂ ಉರಿ ಶೀತದಿಂದ ಪಾರಾಗಬಹುದು. ಯಾಕೆಂದರೆ ಜೇನುತುಪ್ಪ ದಲ್ಲಿ ರೋಗ ನಿರೋಧಕ ಶಕ್ತಿ ಇರುವುದರಿಂದ ಅಮೃತದಂತೆ ದೇಹಕ್ಕೆ ಸಹಕರಿಸುತ್ತದೆ.
  • ಇನ್ನು ಕೆಲವರಿಗೆ ಪದೇ ಪದೇ ಬಾಯಾರಿಕೆ ಆಗುವುದರಿಂದ ಸದಾ ಕಿರಿಕಿರಿ ಅನುಭವಿಸುತ್ತಾರೆ.ಈ ರೀತಿಯ ಸಮಸ್ಯೆ ಇರುವವರು ಜೇನುತುಪ್ಪವನ್ನು ಸೇವಿಸಿದರೆ ಉತ್ತಮ.
  • ಕೆಲವೊಮ್ಮೆ ಆಹಾರದಿಂದ ಉಂಟಾಗುವ ಅಡ್ಡ ಪರಿಣಾಮಗಳಿಂದ ತಪ್ಪಿಸಲು ಈ ಜೇನು ಸಹಕಾರಿಯಾಗುತ್ತದೆ. ಅಲ್ಲದೇ ಚರ್ಮಕ್ಕೂ ಕೂಡ ಇದು ಬಹಳ ಒಳ್ಳೆಯದು.
  • ಇಷ್ಟೇ ಅಲ್ಲದೇ ದೇಹದ ಚಯಾಪಚಯ ಕ್ರಿಯೆಗೂ ಈ ಜೇನು ತುಂಬ ಸಹಾಯವಾಗುತ್ತದೆ. ಹೀಗಾಗಿ ಮಾರ್ಕೆಟ್ ನಿಂದ ಜೇನನ್ನು ತೆಗೆದುಕೊಳ್ಳುವ ವೇಳೆ ಆದಷ್ಟು ಕಲಬೆರಕೆ ಇಲ್ಲದ ತುಪ್ಪವನ್ನು ತೆಗೆದುಕೊಳ್ಳಿ.

Loading

Leave a Reply

Your email address will not be published. Required fields are marked *