ಬೆಂಗಳೂರು: ಕೆಂಗೇರಿಯಲ್ಲಿ 88 ಮಿ.ಮೀ, ಎಚ್.ಗೊಲ್ಲಹಳ್ಳಿ ಹಾಗೂ ಹಾಲನಾಯಕನಹಳ್ಳಿಯಲ್ಲಿ ತಲಾ 81 ಮಿ.ಮೀ, ಹುಸ್ಕೂರಿನಲ್ಲಿ 76 ಮಿ.ಮೀ, ರಾಜರಾಜೇಶ್ವರಿ ನಗರದಲ್ಲಿ 72.5 ಮಿ.ಮೀ, ಕೊಟ್ಟಿಗೆಪಾಳ್ಯದಲ್ಲಿ 71 ಮಿ,ಮೀ, ಎಚ್ಎಎಲ್ ವಿಮಾನ ನಿಲ್ದಾಣ ಭಾಗ ಹಾಗೂ ಮಂಟಪ ಪ್ರದೇಶದಲ್ಲಿ 69 ಮಿ.ಮೀ, ನಾಯಂಡಹಳ್ಳಿ, ಬಿಳೇಕಹಳ್ಳಿಯಲ್ಲಿ ತಲಾ 66 ಮಿ.ಮೀ., ಚಂದಾಪುರದಲ್ಲಿ 65 ಮಿ.ಮೀ, ಅರಕೆರೆ, ನಾಗಾಪುರ, ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ತಲಾ 60 ಮಿ.ಮೀ, ರಾಜಮಹಲ್ ಗುಟ್ಟಹಳ್ಳಿ, ಮಾರತಹಳ್ಳಿಯಲ್ಲಿ ತಲಾ 58 ಮಿ.ಮೀ, ಕೋರಮಂಗಲ,
ದಯಾನಂದನಗರದಲ್ಲಿ ತಲಾ 56 ಮಿ.ಮೀ, ವಿದ್ಯಾಪೀಠದಲ್ಲಿ 54 ಮಿ.ಮೀ, ಬಾಗಲಗುಂಟೆಯಲ್ಲಿ 53 ಮಿ.ಮೀ, ಗಂಟಿಗಾನಹಳ್ಳಿಯಲ್ಲಿ 51 ಮಿ.ಮೀ, ಬಿಟಿಎಂ ಲೇಔಟ್ ಹಾಗೂಸಂಪಂಗಿರಾಮನಗರದಲ್ಲಿ ತಲಾ 50 ಮಿ.ಮೀ, ಹೊರಮಾವು, ವಿವಿಪುರದಲ್ಲಿ ತಲಾ 47 ಮಿ.ಮೀ, ವರ್ತೂರು, ವಣ್ಣಾರಪೇಟೆಯಲ್ಲಿ ತಲಾ 46 ಮಿ.ಮೀ, ನಂದಿನಿ ಲೇಔಟ್ ಹಾಗೂ ಬೆಳ್ಳಂದೂರು ಪ್ರದೇಶದಲ್ಲಿ ತಲಾ 45 ಮಿ.ಮೀ., ಚೌಡೇಶ್ವರಿ ವಾರ್ಡ್ನಲ್ಲಿ 41 ಮಿ.ಮೀ ಹಾಗೂ ಕೋನೇನ ಅಗ್ರಹಾರದಲ್ಲಿ 40 ಮಿ.ಮೀ.ನಷ್ಟು ಮಳೆ ಸುರಿದಿದೆ.