ನಿಮಗೆ ಆರೋಗ್ಯ ಸಂಸ್ಥೆ ಉಂಟಾದಾಗ ಎಲ್ಲದಕ್ಕೂ ನೀವು ವೈದ್ಯರ ಮೊರೆ ಹೋಗಬೇಕೆಂದಿಲ್ಲ. ಕೆಲವೊಂದು ಟಿಪ್ಸ್ ಗಳನ್ನು ಮನೆಯಲ್ಲೇ ಫಾಲೋ ಮಾಡಿದ್ರೆ ಸಾಕು.
ಹಾಗಾದ್ರೆ ನೀವು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದರೆ ನಿವಾರಣೆಗೆ ಈ ಒಂದು ಜ್ಯೂಸ್ ಕುಡಿದರೆ ನಿವಾರಣೆ ಆಗುತ್ತದೆ.
ಮೂಸಂಬಿ ಜ್ಯೂಸ್
ಮೂಸಂಬಿ ಜ್ಯೂಸ್ ಕುಡಿಯುವುದರಿಂದ ಕರುಳಿನಲ್ಲಿರುವ ವಿಷಕಾರಿ ಅಂಶ ನಾಶವಾಗುತ್ತದೆ.
ಪೈನಾಪಲ್ ಜ್ಯೂಸ್
ಪೈನಾಪಲ್ ದೇಹಕ್ಕೆ ಸಾಕಷ್ಟು ನೀರಿನಂಶ ಒದಗಿಸುತ್ತದೆ. ಇದರಿಂದಾಗಿ ಮಲ ವಿಸರ್ಜನೆ ಸುಗಮವಾಗುತ್ತದೆ.
ಕಲ್ಲಂಗಡಿ ಹಣ್ಣು
ಕಲ್ಲಂಗಡಿ ಹಣ್ಣಿನ ಜ್ಯೂಸ್ ದೇಹವನ್ನು ಹೈಡ್ರೇಟ್ ಮಾಡುವುದರ ಜೊತೆಗೆ ಜೀರ್ಣ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಹೀಗಾಗಿ ಕರುಳು ಸಂಬಂಧಿ ಸಮಸ್ಯೆಗಳಿಗೆ ಕಲ್ಲಂಗಡಿ ಹಣ್ಣು ಉತ್ತಮ.
ನಿಂಬೆ ಪಾನಕ
ನಿಂಬೆಯಲ್ಲಿರುವ ವಿಟಮಿನ್ ಸಿ ಅಂಶ ಅಜೀರ್ಣ ಹೋಗಲಾಡಿಸುತ್ತದೆ. ಮಲ ವಿಸರ್ಜಿಸಲು ಕಷ್ಟವಾಗುತ್ತಿದ್ದರೆ, ಪ್ರತಿ ನಿತ್ಯ ಎರಡು ಲೋಟ ನಿಂಬೆ ಪಾನಕ ಸೇವಿಸಿದರೆ ಸಾಕು.