Lemon water: ಪ್ರತಿದಿನ ನಿಂಬೆ ರಸ ಕುಡಿತೀರಾ.? ಎಚ್ಚರ

ನಿಂಬೆ ನೀರನ್ನು (Lemon water) ಡಿಟಾಕ್ಸ್ ಪಾನೀಯ ಎಂದು ಕರೆಯಲಾಗುತ್ತದೆ. ಇದು ತೂಕವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ ನಿಂಬೆ ನೀರು, ಹೆಚ್ಚಿನ ಪ್ರಮಾಣದ ಆಮ್ಲವನ್ನು ಹೊಂದಿರುತ್ತದೆ. ಹೀಗಾಗಿಯೇ ಪ್ರತಿದಿನ ನಿಂಬೆ ಬೆರೆಸಿದ ನೀರನ್ನು ಕುಡಿಯೋದ್ರಿಂದ ಆರೋಗ್ಯದಲ್ಲಿ (Health) ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಅವು ಯಾವುವು?

ದೇಹದಲ್ಲಿನೀರಿನಕೊರತೆ
ನಿಂಬೆ ರಸವು ದೇಹ (Body)ವನ್ನು ಹೈಡ್ರೇಟ್ ಮಾಡುತ್ತದೆ. ಆದರೆ ನೀವು ಇದನ್ನು ನಿಯಮಿತವಾಗಿ ಅಗತ್ಯಕ್ಕಿಂತ ಹೆಚ್ಚು ಸೇವಿಸಿದರೆ, ಅದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಂಬೆರಸ ಜಾಸ್ತಿ ಕುಡಿದರೆ ಆಗಾಗ ಮೂತ್ರ (Urine) ವಿಸರ್ಜನೆಯಾಗುತ್ತದೆ. ಇದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ.

ಜೀರ್ಣಕಾರಿಸಮಸ್ಯೆಗಳು
ನಿಂಬೆ ರಸವನ್ನು ಕುಡಿಯುವುದರಿಂದ ಆಹಾರವು (Food) ವೇಗವಾಗಿ ಜೀರ್ಣವಾಗುತ್ತದೆ ಎಂದು ಹಲವರು ನಂಬುತ್ತಾರೆ. ಆದರೆ ಹೆಚ್ಚು ನಿಂಬೆ ರಸವನ್ನು ಕುಡಿಯುವುದು ವಾಕರಿಕೆ ಮತ್ತು ವಾಯು ಮುಂತಾದ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು.

ಎದೆಯುರಿ
ಅಗತ್ಯಕ್ಕಿಂತ ಹೆಚ್ಚು ನಿಂಬೆ ರಸ ಕುಡಿದರೆ ಎದೆಯುರಿ ಅಥವಾ ಆಸಿಡ್ ರಿಫ್ಲಕ್ಸ್ ಸಮಸ್ಯೆ ಉಂಟಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಈಗಾಗಲೇ ಆಸಿಡ್ ರಿಫ್ಲಕ್ಸ್ ಸಮಸ್ಯೆ ಇದ್ದವರು ನಿಂಬೆ ರಸವನ್ನು ಕುಡಿಯದಿರುವುದು ಉತ್ತಮ.

ಹಲ್ಲುಗಳಿಗೆಹಾನಿಕಾರಕ
ಹೆಚ್ಚು ನಿಂಬೆ ರಸವನ್ನು ಕುಡಿಯುವುದು ಹಲ್ಲಿನ ಆರೋಗ್ಯವನ್ನು ಕೆಡಿಸುತ್ತದೆ. ಇದು ಅನೇಕ ಹಲ್ಲಿನ ಸಮಸ್ಯೆಗಳನ್ನು ಉಂಟುಮಾಡುತ್ತದೆ. ನಿಂಬೆ ರಸವು ಆಮ್ಲೀಯ ಗುಣಗಳಿಂದ ಸಮೃದ್ಧವಾಗಿದೆ, ಇದು ಹಲ್ಲುಗಳನ್ನು ಹಾನಿಗೊಳಿಸುತ್ತದೆ.

ಚರ್ಮದಕಿರಿಕಿರಿ
ಅನೇಕ ಜನರು ತಮ್ಮ ಚರ್ಮದ ಆರೈಕೆಯ ಭಾಗವಾಗಿ ನಿಂಬೆಯನ್ನು ಸೇರಿಸಲು ಬಯಸುತ್ತಾರೆ. ಆದರೆ ತ್ವಚೆಗೆ ನೇರವಾಗಿ ನಿಂಬೆಹಣ್ಣನ್ನು ಹಚ್ಚುವುದರಿಂದ ತ್ವಚೆಯಲ್ಲಿ ಕಿರಿಕಿರಿ ಉಂಟಾಗುತ್ತದೆ. ಹಾಗಾಗಿ ಇದನ್ನು ನೇರವಾಗಿ ತ್ವಚೆಗೆ ಹಚ್ಚುವ ಮುನ್ನ ನಿಂಬೆ ರಸವನ್ನು ನೀರಿಗೆ ಬೆರೆಸಿ ಚರ್ಮಕ್ಕೆ ಹಚ್ಚಿಕೊಳ್ಳಿ. ಅದರ ನಂತರ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿ.

Loading

Leave a Reply

Your email address will not be published. Required fields are marked *