ರಾಮನಗರ: ಮುನಿರತ್ನ ಪ್ರೊಡ್ಯುಸರ್ ಆದರೆ ಡಿ.ಕೆ.ಸುರೇಶ್ ಡಿಸ್ಟ್ರಿಬ್ಯೂಟರ್ ಎಂಬ ಬಿಜೆಪಿ ಶಾಸಕ ಮುನಿರತ್ನ ಹೇಳಿಕೆಗೆ ತಿರುಗೇಟು ನೀಡಿದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್, ಅವರು ಪ್ರೊಡ್ಯುಸ್ ಮಾಡುತ್ತಿದ್ದಾಗ ನಾನು ಡಿಸ್ಟ್ರಿಬ್ಯೂಟ್ ಮಾಡುತ್ತಿರಲಿಲ್ಲ. ಅವರು ಮಿಸ್ ಕಮ್ಯುನಿಕೇಷನ್ ಮಾಡಿದ್ದಾರೆ.
ನಾನು ರಾಜಕಾರಣಕ್ಕೆ ಬರುವುದಕ್ಕಿಂತ ಮುಂಚಿತವಾಗಿ ಅವರು ಪ್ರೊಡ್ಯುಸ್ ಮಾಡುತ್ತಿದ್ದರು, ನಾನು ಡಿಸ್ಟ್ರಿಬ್ಯೂಟ್ ಬಿಟ್ಟು ಎಕ್ಸಿಬ್ಯೂಷನ್ ಮಾಡುತ್ತಿದ್ದೇನೆ. ಅವರು ಡೈರೆಕ್ಷನ್ ಕೂಡ ಮಾಡುತ್ತಾರೆ. ಅದೆಂತದೋ ಮುನಿರತ್ನ ಕುರುಕ್ಷೇತ್ರ ಅಂತ ಮಾಡಿದ್ದರಲ್ಲಾ.! ಕುರುಕ್ಷೇತ್ರವನ್ನೇ ಬರೆದ ವ್ಯಕ್ತಿ ಇವರು. ಅನುಕೂಲಕ್ಕೆ ತಕ್ಕಂತೆ ಕುರುಕ್ಷೇತ್ರ ತಿದ್ದಿದವರು ಇವರು. ಹಾಗಾಗಿ ಅವರು ಏನು ಬೇಕಾದರೂ ಮಾಡುತ್ತಾರೆ ಎಂದರು.