ಬೆಂಗಳೂರು;- ಡಿಕೆ ಶಿವಕುಮಾರ್, ಸಿದ್ದರಾಮಯ್ಯ ವಿರುದ್ಧ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಆಪರೇಷನ್ ಕಮಲ ಆರೋಪ ವಿಚಾರವಾಗಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಾ ಪತ್ರಕರ್ತರನ್ನ ಒಟ್ಟಿಗೆ ಕೂರಿಸಿ ಹೇಳಲಿ, ಹೇಳಲಿ 50ಕೋಟಿ ಆಪರೇಷನ್ ಮಾಡ್ತಿದ್ದಾರೆ ಅಂತ. ಭಿಕ್ಷೆ ಎತ್ತಾದ್ರೂ ಹಣ ಸಂಗ್ರಹ ಮಾಡಿ ಕೊಡ್ತೇವೆ. ಅದಕ್ಕೆ ಹೇಳೋದು ಸಿದ್ದರಾಮಯ್ಯ ಸುಳ್ಳುಗಾರ ಅಂತ. ರಾತ್ರೋ ರಾತ್ರಿ ಕಾವೇರಿ ನೀರನ್ನ ತಮಿಳುನಾಡಿಗೆ ಬಿಟ್ಟ ಡಿಕೆಶಿನ ಕಳ್ಳ ಅಂತಾರೆ. ಒಬ್ಬರನ್ನ ಕಳ್ಳ, ಮತ್ತೊಬ್ಬರನ್ನ ಸುಳ್ಳ ಅದ್ರೆ ಸಿಟ್ಟು ಮಾಡಿಕೊಳ್ತಾರೆ. ನಾನು ಹೇಳ್ತಿಲ್ಲ ಜನ ಮಾತಾಡ್ತಿದ್ದಾರೆ. ಪ್ರತೀ ದಿನ ಸುಳ್ಳು. 50 ಕೋಟಿ ನಮಗೆ ಕೊಡೋಕೆ ಗ್ರಹಚಾರಾನಾ ಎಂದರು.
ಇನ್ನೂ ಒಬ್ಬನನ್ನ ಕರೆತಂದು ಸರ್ಕಾರ ಮಾಡೋಕೆ ಆಗುತ್ತಾ.? ಇದೆಲ್ಲಾ ಸುಳ್ಳು ಎಂದರು. ಸರ್ಕಾರ ಸಂಪೂರ್ಣ ಬಿದ್ದು ಹಾಳಾಗಿದೆ. ಕೆಎಸ್‌ಆರ್‌ಟಿಸಿ ಗೆ ಹಣವೇ ಕೊಟ್ಟಿಲ್ಲ. ಪುಕ್ಸಟ್ಟೆ ಕೊಡ್ತೀನಿ ಅಂತ ಹೇಳಿದ್ದಾರೆ. ಹಣ ಕೊಡದೆ ಡಿಪಾರ್ಟ್‌ಮೆಂಟ್ ಹೇಗೆ ಉಳಿಯುತ್ತೆ. ಇಂತ ಮೋಸಗಾರ ಸರ್ಕಾರ ನನ್ನ ಜೀವನದಲ್ಲಿ ನೋಡಿಲ್ಲ. ನಾನು17 ಸಾರಿ ಬಜೆಟ್ ಮಾಡಿದ್ದೀನಿ ಅಂತಾರೆ. ಇದೇನಾ ಬಜೆಟ್ ಮಂಡನೆ ಮಾಡೋದು. ಬಜೆಟ್ ತಕ್ಕಂತೆ ಖರ್ಚು ಮಾಡಬೇಕು. ಕೇಂದ್ರದ ಮನೆ ಮನೆಗೂ ಗಂಗೆ ಅಂತ ಮಾಡಿದೆ. ಕೇಂದ್ರದ ಹಣ, ಬೇರೆ ಯೋಜನೆ ನೀಡಿದೆ. ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದೆವು.
ಭ್ರಷ್ಟಾಚಾರ ದಂಧೆ, ಟ್ರಾನ್ಸ್‌ಫರ್ ಎಲ್ಲಾ ಮಾಡ್ತಿದ್ದಾರೆ. ಈಗಲೂ ರಿಟೈರ್ಡ್ ಜಡ್ಜ್ ನೇತೃತ್ವದ ಸಮಿತಿ ಮಾಡಲಿ. ಹೇಗೆ ಕೋಟ್ಯಾಂತರ ಹಣ ತೆಗೆದುಕೊಂಡಿದ್ದಾರೆ. ಅವರ ಮುಂದೆ ಕರೆದುಕೊಂಡು ಹೋಗಿ ನಿಲ್ಲಿಸ್ತೇನೆ.!ಇಲ್ಲ ಅಂದ್ರೆ ನಾನು ರಾಜಕೀಯ ಬಿಡ್ತೀನಿ. ಇದು ಆರು ತಿಂಗಳವರೆಗೂ ಸರ್ಕಾರ ಇರೋದಿಲ್ಲ.ಇಂತ ಕೆಟ್ಟ ಸರ್ಕಾರ ನನ್ನ ಜೀವನದಲ್ಲಿ ನೋಡಿರಲಿಲ್ಲ ಎಂದರು.