ಬಿಬಿಎಂಪಿ ವ್ಯಾಪ್ತಿಯ ಗುತ್ತಿಗೆದಾರರಿಗೆ ಹಣ ಬಿಡುಗಡೆ ಬಗ್ಗೆ ಬಿಜೆಪಿ ಶಾಸಕ ಸಿ.ಎನ್.ಅಶ್ವತ್ಥ್ ನಾರಾಯಣ ಪ್ರಸ್ತಾಪ ಮಾಡಿದರು. ಈ ವೇಳೆ ಅಶ್ವಥ್ ನಾರಾಯಣ ಸಾಹೇಬರು ಕೊಟ್ಟ ಸಲಹೆ ಪರಿಗಣಿಸುತ್ತೇನೆ ಎಂದು ಡಿಸಿಎಂ, ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಸಂಕ್ಷಿಪ್ತ ಉತ್ತರ ನೀಡಿದರು. ಈ ವೇಳೆ ಕುಳಿತಲ್ಲೇ ಏನು ಹೀಗೆ ಉತ್ತರ ನೀಡಿದ್ರಲ್ಲಾ ಎಂದು ಅಶ್ವಥ್ ನಾರಾಯಣ ಅವರು ಕೈ ತಿರುಗಿಸಿ ನಕ್ಕರು. ನಾನು 30 ವರ್ಷದಿಂದ ಇಲ್ಲಿ ಇದ್ದೇನೆ, ಹೇಗೆ ಉತ್ತರ ಕೊಡಬೇಕು ಅಂತಾ ನನಗೆ ಗೊತ್ತಿಲ್ವಾ ಎಂದು ಡಿಸಿಎಂ ಕಿಚಾಯಿಸಿದರು. ಆಗ ನಾನು ಹೆಚ್ಚು ಚರ್ಚೆ ಆಗಬಹುದು ಎಂದು ವಿಷಯವನ್ನು ಕೊನೆಯಲ್ಲಿ ಇಟ್ಟಿದ್ದೆ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು.