ಜಿಲ್ಲಾ ಉಸ್ತುವಾರಿ ಸಚಿವ ಇಂಥ ಸಣ್ಣತನ ಪ್ರದರ್ಶಿಸಬಾರದು: ಬಿವೈ ರಾಘವೇಂದ್ರ

ಶಿವಮೊಗ್ಗ:– ಮಧು ಬಂಗಾರಪ್ಪ ಸಣ್ಣತನದ ರಾಜಕಾರಣ ಮತ್ತು ಅಧಿಕಾರಿಗಳನ್ನು ಬೆದರಿಸುವುದು ನಿಲ್ಲಿಸಬೇಕು ಎಂದು ಬಿವೈ ರಾಘವೇಂದ್ರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸಚಿವ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು, ಅಧಿಕಾರಿಗಳ ಮೇಲೆ ದರ್ಪ ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದರು. ಶಿವಮೊಗ್ಗ ಜಿಲ್ಲೆಯಲ್ಲಿ 100 ಬಿಎಸ್ ಎನ್ ಎಲ್ ಟಾವರ್​ಗಳಿಗೆ ಕೇಂದ್ರ ಅರಣ್ಯ ಸಚಿವಾಲಯದಿಂದ ತಾವು ಕ್ಲೀಯರನ್ಸ್ ಕೊಡಿಸಿದ್ದು ಇನ್ನೇನು ಕೆಲಸ ಆರಂಭಾವಾಗಲಿದೆ ಎಂದ ರಾಘವೇಂದ್ರ,

ಮಧು ಬಂಗಾರಪ್ಪ ಅಧಿಕಾರಿಗಳನ್ನು ಹೆದರಿಸುವ ಭಯ ಹುಟ್ಟಿಸುವ ಕೆಲಸದಲ್ಲಿ ತೊಡಗಿದ್ದಾರೆಂದು ಹೇಳಿದರು. ತಾನು ನಡೆಸುವ ಸಭೆಗಳಿಗೆ ಹಾಜರಾಗುವ ಆಧಿಕಾರಿಗಳಿಗೆ ಮಧು ಬಂಗಾರಪ್ಪ ಗದರುತ್ತಾರೆ, ಮೀಟಿಂಗ್ ಹಾಜರಾಗಬಾರದೆಂದು ತಾಕೀತು ಮಾಡುತ್ತಾರೆ ಎಂದು ರಾಘವೇಂದ್ರ ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಇಂಥ ಸಣ್ಣತನ ಪ್ರದರ್ಶಿಸಬಾರದು ಎಂದು ಸಂಸದ ಖಾರವಾಗಿ ಹೇಳಿದರು.

 

Loading

Leave a Reply

Your email address will not be published. Required fields are marked *