ಮಂಡ್ಯ: ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana) ನಿಧನದ ಹಿನ್ನೆಲೆ ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಲಾಯಿತು. ತಾಯಿಯ ಅಸ್ಥಿ ವಿಸರ್ಜನೆಯನ್ನು ಪುತ್ರ ಶೌರ್ಯ ಮಾಡಿದ್ದಾರೆ. ಇಂದು ಬೆಳಿಗ್ಗೆ (ಆಗಸ್ಟ್ 11) ವಿಜಯ ಕುಟುಂಬ ಶ್ರೀರಂಗಪಟ್ಟಣಕ್ಕೆ ಬಂದಿತ್ತು. ವಿಧಿ ವಿಧಾನಕ್ಕೂ ಮುನ್ನ ಪುತ್ರ ಶೌರ್ಯನಿಗೆ ಮುಡಿ ಕೊಡಿಸಿದರು. ಬಳಿಕ ವೈದಿಕ ರಮೇಶ್ ಶರ್ಮಾ ನೇತೃತ್ವದಲ್ಲಿ ಕಾರ್ಯ ಮಾಡಲಾಯಿತು.
ಶೌರ್ಯ ಜೊತೆ ವಿಜಯ ಕೂಡ ಶ್ರದ್ಧಾ ಕಾರ್ಯ ನೆರವೇರಿಸಿದರು. ನಂತರ ಅಸ್ಥಿಗೆ ಪೂಜೆ, ಅಸ್ಥಿ ವಿಸರ್ಜನೆ ಮಾಡಲಾಯಿತು. ಕೆಲ ದಿನಗಳ ಹಿಂದೆ ಸ್ಪಂದನಾ ಸ್ನೇಹಿತರ ಜೊತೆ ಬ್ಯಾಂಕಾಕ್‌ಗೆ ತೆರಳಿದ್ದರು. ಹೃದಯಾ ಘಾತದಿಂದ ಸ್ಪಂದನಾ ವಿಧಿವಶರಾಗಿದ್ದರು. ಆಗಸ್ಟ್ 9ರಂದು ಹರಿಶ್ಚಂದ್ರ ಘಾಟ್‌ನಲ್ಲಿ ಸ್ಪಂದನಾರ ಅಂತಿಮ ಸಂಸ್ಕಾರ ನಡೆಯಿತು. ಸ್ಪಂದನಾ ಹಠಾತ್ ನಿಧನ ವಿಜಯ ಮತ್ತು ಅವರ ಕುಟುಂಬಕ್ಕೆ ಶಾಕ್ ನೀಡಿದೆ.