ಹಗರಿ ಬೊಮ್ಮನಹಳ್ಳಿ;- ಪಕ್ಷದ ಭಿನ್ನಾಭಿಪ್ರಾಯ ಹೈಕಮಾಂಡ್ ಗಮನಕ್ಕೆ ತಂದು ಬಗೆಹರಿಸುತ್ತೇವೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಹೇಳಿದರು.ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಗಳು ಸಾರ್ವಜನಿಕವಾಗಿ ಚರ್ಚೆ ಮಾಡುವುದು ಸೂಕ್ತವಲ್ಲ. ಪಕ್ಷದ ಸಂಘಟನೆಯಲ್ಲಿ ಏನಾದರೂ ಭಿನ್ನಾಭಿಪ್ರಾಯಗಳು ಇದ್ದರೆ ಗಮನ ಹರಿಸುತ್ತೇವೆ. ಇಂತಹ ವಿಚಾರಗಳನ್ನು ಪಕ್ಷದ ಹೈಕಮಾಂಡ್ ಗಮನಕ್ಕೆ ತಂದು ಬಗೆಹರಿಸುತ್ತೇವೆ. ಪಕ್ಷವನ್ನು ಉಳಿಸುವುದಕ್ಕೆ ಹಾಗೂ ಮತ್ತಷ್ಟೂ ಗಟ್ಟಿ ಮಾಡುವುದಕ್ಕೆ ಗಮನ ಹರಿಸುತ್ತೇವೆ ಎಂದರು.
ಪಕ್ಷದ ಆಂತರಿಕ ಕಚ್ಚಾಟದ ಕುರಿತಂತೆ ಪ್ರಶ್ನಿಸಿದಾಗ, ಎಲ್ಲರೂ ಪಕ್ಷನಿಷ್ಠರು ಇದ್ದಾರೆ. ವೈಯಕ್ತಿಕವಾದ ಸಣ್ಣಪುಟ್ಟ ಬೇರೆಬೇರೆ ಗೊಂದಲಗಳಿಂದ ಮತ್ತು ವ್ಯತ್ಯಾಸಗಳಿಂದ ಈ ರೀತಿಯ ಸಂದರ್ಭಗಳು ಸೃಷ್ಟಿಯಾಗುತ್ತವೆ, ಇವು ಮುಂದುವರೆಯಬಾರದು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ನೀಡಿರುವ ಹೇಳಿಕೆ ಕುರಿತು ಪೂರ್ಣವಾದ ಮಾಹಿತಿ ಇಲ್ಲ. ಈ ಕುರಿತು ಸಂಪೂರ್ಣ ಮಾಹಿತಿ ಪಡೆದು ಸಾಮರಸ್ಯ ರೂಪಿಸುವ ಪ್ರಯತ್ನ ಮಾಡುವೆ. ಅಗತ್ಯ ಬಿದ್ದರೆ ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವುದಾಗಿ ಉಗ್ರಪ್ಪ ತಿಳಿಸಿದರು