ಹಳಿ ತಪ್ಪಿದ ಗೂಡ್ಸ್ ರೈಲು : ಮೂರು ರೈಲುಗಳ ಸಂಚಾರ ರದ್ದು

ವಿಜಯನಗರ: ಜಿಲ್ಲೆಯ ಹೊಸಪೇಟೆತಾಲೂಕಿನ ವ್ಯಾಸನಕೇರಿ ರೈಲು ನಿಲ್ದಾಣದ ಸಮೀಪ ನಿನ್ನೆ ಸಾಯಂಕಾಲ ಗೂಡ್ಸ್ ರೈಲಿನ  ಕೆಲ ಬೋಗಿಗಳು ಹಳಿತಪ್ಪಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.​ ಈ ಹಿನ್ನಲೆ ಹಲವು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದ್ದು, ಯಶವಂತಪುರ- ವಿಜಯಪುರ ಎಕ್ಸಪ್ರೆಸ್ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಹಳಿಗಳಿಂದ ರೈಲು ತೆರವು ಕಾರ್ಯದ ನಿಮಿತ್ತ ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಹೊಸಪೇಟೆ- ಹರಿಹರ ಪ್ಯಾಸೆಂಜರ್, ಹರಿಹರ- ಬಳ್ಳಾರಿ ಡೆಮೊ ಸ್ಪೆಷಿಯಲ್, ಬಳ್ಳಾರಿ – ಹೊಸಪೇಟೆ ಡೆಮೋ ಸ್ಪೆಷಿಯಲ್ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಇನ್ನುಳಿದಂತೆ ವಿಜಯಪುರ- ಯಶವಂತಪುರ ಮತ್ತು ಯಶವಂತಪುರ- ವಿಜಯಪುರ ಎಕ್ಸಪ್ರೆಸ್ ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ಹೊಸಪೇಟೆ- ಕೊಟ್ಟೂರು ಮಾರ್ಗದ ಬದಲಾಗಿ ಹೊಸಪೇಟೆ, ಬಳ್ಳಾರಿ, ರಾಯದುರ್ಗ, ಚಿಕ್ಕಜಾಜೂರು ಮಾರ್ಗದಲ್ಲಿ ಸಂಚಾರಿಸಲಿವೆ.

Loading

Leave a Reply

Your email address will not be published. Required fields are marked *