ಬಾಗಲಕೋಟೆ: ಜಮೀನುದಲ್ಲಿರುವ ಬೋರವೆಲ್ಗೆ ವಿದ್ಯುತ್ ಸಂಪರ್ಕ ಮತ್ತು ಟಿ.ಸಿ,ಆಳವಡಿಸಿಕೊಡುವ ಸಲುವಾಗಿ 20,ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟ ಸಾವಳಗಿ ಹೆಸ್ಕಾಂ ಇಲಾಖೆಯ ಶಾಖಾಧಿಕಾರಿ ಮಲ್ಲಿಕಾರ್ಜುನ್ ಶಿವಾನಂದ ಡೊಮನಾಳ ಹಾಗೂ ಬಿಲ್ ಕಲೆಕ್ಟರ್ ಶಿವಲಿಂಗ @ ಶಿವರುದ್ರಪ್ಪ ಬಸಲಿಂಗಪ್ಪ ಕನಾಳ ಲೋಕಾಯುಕ್ತರ ಬಲೆಗೆ ಬಿದ್ದಿರುವ ಘಟನೆ ಬುಬೆಳಕಿಗೆ ಬಂದಿದೆ. ತುಂಗಳ ಗ್ರಾಮದ ಶ್ರೀಮತಿ ತಂಗೆವ್ವ ಗಂ ಹನಮಂತ ಇಟ್ನಾಳ ಎಂಬುವವರು ಬಾಗಲಕೋಟೆ ಲೋಕಾಯುಕ್ತ ಪೊಲೀಸರಿಗೆ ನೀಡಿದ ದೂರಿನ ಅನ್ವಯ ಜಮಖಂಡಿ ಜಮೀನುದಲ್ಲಿರುವ ಬೋರವೆಲ್ಗೆ ವಿದ್ಯುತ್ ಸಂಪರ್ಕ ಮತ್ತು ಟಿ.ಸಿ, ಆಳವಡಿಸಿಕೊಡುವ ಸಲುವಾಗಿ ಶಿವರುದ್ರಪ್ಪ ,ಮಲ್ಲಿಕಾರ್ಜುನ ಶಾಖಾಧಿಕಾರಿಗಳು ರೂ. 20,ಸಾವಿರ ರೂ, ಲಂಚದ ಹಣಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ಹಣ ರೂ.10,ಸಾವಿರ ರೂ,ತಂದುಕೊಡಲು ಹಾಗೂ ಉಳಿದ ರೂ. 10,000/- ಗಳನ್ನು ಕೆಲಸವಾದ ನಂತರ ಕೊಡಬೇಕು ಅಂತಾ ಬೇಡಿಕೆ ಇಟ್ಟಿದ್ದರು. ಬಿಲ್ ಕಲೆಕ್ಟರ್ ಶಿವಲಿಂಗ ಕನಾಳ ಎಂಬುವರಿಂದ ೧೦ ಸಾವಿರ ಪಡೆಯುವ ವೇಳೆ ದಾಳಿ ನಡೆಸಿದಾಗ ಸಿಕ್ಕಿಬಿದ್ದಿದ್ದಾರೆ.