ಕೆಂಪು ರಾಜ ಟೊಮ್ಯಾಟೊ ಡಿಮ್ಯಾಂಡ್ ಭಾರೀ ಕುಸಿತ

ನಗರದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬರುತ್ತಿದ್ದು, ಟೊಮ್ಯಾಟೊ ದರ ಇಳಿಕೆಯಾಗಿದೆ.ಅತಿ ದೊಡ್ಡ ಟೊಮೆಟೋ ಮಾರುಕಟ್ಟೆಆಗಿರುವ ಕೋಲಾರದ ಸಿಎಂಆರ್‌ ಮಾರುಕಟ್ಟೆಯಲ್ಲಿ 15 ಕೇಜಿ ನಾಟಿ ಟೊಮೆಟೋ ಬಾಕ್ಸ್‌ 250- 400, ಹೈಬ್ರಿಡ್‌ ಟೊಮೆಟೋ 250- 450ಕ್ಕೆ ಇಳಿದಿದೆ. ಇದಲ್ಲದೆ, ಸುತ್ತಲಿನ ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರದಿಂದ ಬರುವ ಟೊಮೆಟೋ ಪ್ರಮಾಣವೂ ಹೆಚ್ಚಾಗಿರುವುದರಿಂದ ಬೆಲೆಯೂ ಕಡಿಮೆಯಾಗಿದೆ.

ಇದರ ಪರಿಣಾಮ ನಗರದ ಕಲಾಸಿಪಾಳ್ಯ, ಬಿನ್ನಿಮಿಲ್‌, ಕೆ.ಆರ್‌.ಮಾರುಕಟ್ಟೆಗಳಿಗೆ ಈ ಹಿಂದೆ ದಿನಕ್ಕೆ ಕೇವಲ 350 ಕ್ವಿಂಟಲ್‌ ಬರುತ್ತಿದ್ದ ಟೊಮೆಟೋ ಇದೀಗ ಬೇಡಿಕೆಗೆ ಅನುಸಾರವಾಗಿ ಪೂರೈಕೆ ಆಗುತ್ತಿದೆ. ಸಗಟು ಮಾರುಕಟ್ಟೆಯಲ್ಲಿ 20 ಕೇಜಿ ಬಾಕ್ಸ್‌ಗೆ 600- 700ಕ್ಕೆ ಇಳಿಕೆಯಾಗಿದೆ. ಹೀಗಾಗಿ ಮಲ್ಲೇಶ್ವರ, ಯಶವಂತಪುರ, ಜಯನಗರ ಸೇರಿದಂತೆ ಬಡಾವಣೆಗಳ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆಯೂ ಕಡಿಮೆಯಾಗಿದೆ. ಕೇಜಿಗೆ 20 ನಿಂದ ಗರಿಷ್ಠ .30 ರವರೆಗೆ ಮಾರಾಟವಾಗುತ್ತಿದೆ.

Loading

Leave a Reply

Your email address will not be published. Required fields are marked *