ಕೇಂದ್ರದ ವಿರುದ್ಧ ದೆಹಲಿ ಸರ್ಕಾರದ ಹೋರಾಟ; ಉದ್ಧವ್ ಠಾಕ್ರೆ ಬೆಂಬಲ ಕೋರಿದ ಕೇಜ್ರಿವಾಲ್

ದೆಹಲಿಯಲ್ಲಿ ಆಡಳಿತಾತ್ಮಕ ಸೇವೆಗಳ ನಿಯಂತ್ರಣದ ಕುರಿತು ಕೇಂದ್ರದ ಸುಗ್ರೀವಾಜ್ಞೆಯ ವಿರುದ್ಧ ಎಎಪಿ ಹೋರಾಟಕ್ಕೆ ಸಿಎಂ ಅರವಿಂದ ಕೇಜ್ರಿವಾಲ್ ಬಿಜೆಪಿಯೇತರ ಪಕ್ಷಗಳ ಬೆಂಬಲ ಕೋರಿದ್ದಾರೆ.

ಇದಕ್ಕಾಗಿ ಅವರು ಇಂದು ಮುಂಬೈನಲ್ಲಿ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತನಾಡಿದರು.

 

ಈ ವೇಳೆ ಅವರೊಂದಿಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸದಸ್ಯರಾದ ಸಂಜಯ್ ಸಿಂಗ್ ಮತ್ತು ರಾಘವ್ ಚಡ್ಡಾ ಮತ್ತು ದೆಹಲಿ ಸಚಿವೆ ಅತಿಶಿ ಇದ್ದರು.

ಎಎಪಿಯ ರಾಷ್ಟ್ರೀಯ ಸಂಚಾಲಕರಾದ ಅರವಿಂದ ಕೇಜ್ರಿವಾಲ್ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರನ್ನೂ ಭೇಟಿಯಾಗಿ ಕೇಂದ್ರದ ಸುಗ್ರೀವಾಜ್ಞೆಯ ವಿರುದ್ಧ ಬೆಂಬಲ ಕೋರಲಿದ್ದಾರೆ.

ಮಂಗಳವಾರ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಕೇಂದ್ರದ ಸುಗ್ರೀವಾಜ್ಞೆಯ ವಿರುದ್ಧ ಎಎಪಿಯ ಹೋರಾಟಕ್ಕೆ ಬೆಂಬಲವನ್ನು ಪಡೆಯಲು ತಮ್ಮ ರಾಷ್ಟ್ರವ್ಯಾಪಿ ಪ್ರವಾಸದ ಭಾಗವಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಕೋಲ್ಕತ್ತಾದಲ್ಲಿ ಭೇಟಿಯಾಗಿದ್ದರು.

ದೆಹಲಿಯಲ್ಲಿ ಗ್ರೂಪ್-ಎ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಮತ್ತು ನಿಯೋಜಿಸುವ ಅಧಿಕಾರವನ್ನು ರಚಿಸಲು ಕೇಂದ್ರವು ರಾಷ್ಟ್ರ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರ ಸ್ಥಾಪಿಸಿ ಶುಕ್ರವಾರ ಸುಗ್ರೀವಾಜ್ಞೆಯನ್ನು ಪ್ರಕಟಿಸಿದೆ.

ದೆಹಲಿಯಲ್ಲಿ ಸೇವಾವಲಯದ ಮೇಲಿನ ಅಧಿಕಾರವನ್ನ ಚುನಾಯಿತ ಸರ್ಕಾರಕ್ಕೆ ಹಸ್ತಾಂತರಿಸುವ ಸುಪ್ರೀಂ ಕೋರ್ಟ್ ಆದೇಶದ ಒಂದು ವಾರದ ನಂತರ ಸುಗ್ರೀವಾಜ್ಞೆಯು ಹೊರಬಿದ್ದಿದೆ.

Loading

Leave a Reply

Your email address will not be published. Required fields are marked *