ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅತಿ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಮೂಲಕ ದೇಶದ ವಿದ್ಯುತ್ ಚಾಲಿತ ವಾಹನಗಳ ರಾಜಧಾನಿಯಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. 42 ಚಾರ್ಜಿಂಗ್ ಸ್ಟೇಷನ್ ಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕೇಜ್ರಿವಾಲ್, 2013 ರಿಂದ ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯದ ಮಟ್ಟ ಕಡಿಮೆಯಾಗಿದೆ ಎಂದು ತಿಳಿಸಿದರು.
ಮಾಲಿನ್ಯವನ್ನು ಕಡಿಮೆಗೊಳಿಸಲು ವಿದ್ಯುತ್ ಚಾಲಿತ ವಾಹನಗಳ ಉತ್ತೇಜನಕ್ಕೆ ಆರಂಭಿಸಿದೇವು. 2020ರಲ್ಲಿ ವಿದುಯ್ತ್ ವಾಹನಗಳಿಗಾಗಿ ನೀತಿಯೊಂದನ್ನು ರೂಪಿಸಿದೇವು ಮತ್ತು 2025 ರ ವೇಳೆಗೆ ದೆಹಲಿಯಲ್ಲಿ ಖರೀದಿಸಿದ ಎಲ್ಲಾ ವಾಹನಗಳಲ್ಲಿ ನಾಲ್ಕನೇ ಒಂದು ಭಾಗದಷ್ಟು ಎಲೆಕ್ಟ್ರಿಕ್ ಆಗಿರುವ ಗುರಿ ಹೊಂದಿದ್ದೇವೆ ಎಂದರು.
ದೆಹಲಿಯನ್ನು ವಿದ್ಯುತ್ ಚಾಲಿತ ವಾಹನಗಳ ರಾಜಧಾನಿಯನ್ನಾಗಿ ಮಾಡುವ ಗುರಿಯೊಂದಿಗೆ 2020ರಲ್ಲಿ ದೆಹಲಿ ವಿದ್ಯುತ್ ಚಾಲಿತ ನೀತಿಯನ್ನು ಅನುಷ್ಟಾನಗೊಳಿಸಲಾಗಿತ್ತು. ರಾಷ್ಟ್ರ ರಾಜಧಾನಿಯಲ್ಲಿ ಖರೀದಿಸಿದ ಎಲ್ಲಾ ವಾಹನಗಳಲ್ಲಿ ಶೇಕಡಾ 13 ರಷ್ಟು ಎಲೆಕ್ಟ್ರಿಕ್ ವಾಹನಗಳು ಎಂಬುದನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ಆಗಸ್ಟ್ 2020 ರಿಂದ 1. 28 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲಾಗಿದೆ. ನೀತಿ ಆಯೋಗ ಕೂಡಾ ದೆಹಲಿ ಎಲೆಕ್ಟ್ರಿಕ್ ವಾಹನಗಳ ನೀತಿಯನ್ನು ಶ್ಲಾಘಿಸಿದೆ ಎಂದು ಅವರು ಹೇಳಿದರು.