ನವದೆಹಲಿ: ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೆಹಲಿ ಚಲೋ (Delhi Chalo) ಹಮ್ಮಿಕೊಂಡಿರುವ ರೈತರ (Farmers) ಮೇಲೆ ಶಂಭು ಗಡಿಯಲ್ಲಿ (Shambhu Border) ಪೊಲೀಸರು ಅಶ್ರುವಾಯು (Tear Gas) ಪ್ರಯೋಗ ಮಾಡಿದ್ದಾರೆ.
ಹರ್ಯಾಣ-ಪಂಜಾಬ್ (Punjab-Haryana) ಗಡಿಯಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಹರ್ಯಾಣ ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿ ಹಲವರನ್ನು ವಶಕ್ಕೆ ಪಡೆದಿದ್ದಾರೆ. ರೈತರ ಗುಂಪಿನ ಮಧ್ಯೆ ಪೊಲೀಸರಿಗೆ ಹೋಗಲು ಸಾಧ್ಯವಿಲ್ಲದ ಕಾರಣ ಡ್ರೋನ್ ಮೂಲಕ ಟಿಯರ್ ಗ್ಯಾಸ್ ಶೆಲ್‌ಗಳನ್ನು ಬೀಳಿಸಿ ರೈತರನ್ನು ಚದುರಿಸಲಾಗುತ್ತಿದೆ.
ಉತ್ತರ ಪ್ರದೇಶ,ಹರ್ಯಾಣ ಮತ್ತು ಪಂಜಾಬ್ ಭಾಗಗಳಿಂದ ಭಾರಿ ಸಂಖ್ಯೆಯ ರೈತರು ದೆಹಲಿಯತ್ತ ಧಾವಿಸುತ್ತಿದ್ದಾರೆ. ಆದರೆ ಅವರು ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸದಂತೆ ತಡೆಯಲು ಸಿಂಘು, ಟಿಕ್ರಿ, ಗಾಜೀಪುರ ಗಡಿಯಲ್ಲಿ ಹಲವು ಹಂತಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.
ರಸ್ತೆಗಳಿಗೆ ಅಡ್ಡಲಾಗಿ ಮೊಳೆಗಳ ಪಟ್ಟಿ, ಸಿಮೆಂಟ್ ಇಟ್ಟಿಗೆ, ಮುಳ್ಳು ತಂತಿ ಇಡಲಾಗಿದೆ. ಹೀಗಿದ್ದರೂ ಟ್ರ್ಯಾಕ್ಟರ್ ಇದನ್ನು ಬೇಧಿಸಿಯೂ ಟ್ರ್ಯಾಕ್ಟರ್ ಮುಂದೆ ಸಾಗಿದರೂ ಅವುಗಳನ್ನು ತಡೆಯಲು ಕಂಟೈನರ್ ಲಾರಿಗಳನ್ನು ಸಿದ್ಧವಾಗಿ ಇಡಲಾಗಿದೆ.