ಟೀಮ್ ಇಂಡಿಯಾ ವಿರುದ್ಧ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ವಿಶ್ವಕಪ್ ಪಂದ್ಯದಲ್ಲಿ 41 ರನ್ ಗಳಿಸಿದ ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಡೇವಿಡ್ ವಾರ್ನರ್ , ವಿಶ್ವಕಪ್ ಟೂರ್ನಿಯಲ್ಲಿ ವೇಗದ 1000 ರನ್ ಪೂರೈಸಿ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ಎಬಿಡಿ ವಿಲಿಯರ್ಸ್ ಹೆಸರಿನಲ್ಲಿದ್ದ ಮಹತ್ತರ ದಾಖಲೆ ಮುರಿದು ವಿಶ್ವದಾಖಲೆ ನಿರ್ಮಿಸಿದ್ದಾರೆ.
ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ತೋರಿದ ಡೇವಿಡ್ ವಾರ್ನರ್ 52 ಎಸೆತಗಳಲ್ಲಿ 6 ಬೌಂಡರಿ ಸೇರಿ 41 ರನ್ ಬಾರಿಸಿ ಅರ್ಧಶತಕ ಹೊಸ್ತಿಲಲ್ಲಿದ್ದಾಗ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಬೌಲಿಂಗ್ ನಲ್ಲಿ ಔಟಾಗಿ ಪೆವಿಲಿಯನ್ ಹಾದಿ ಹಿಡಿದರು.
ವಿಶ್ವಕಪ್ ಟೂರ್ನಿಯಲ್ಲಿ ವೇಗದ 1000 ರನ್
* ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) – 19 ಇನಿಂಗ್ಸ್
* ಸಚಿನ್ ತೆಂಡೂಲ್ಕರ್ (ಭಾರತ) – 20 ಇನಿಂಗ್ಸ್
* ಎಬಿಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ) – 20 ಇನಿಂಗ್ಸ್
* ಸೌರವ್ ಗಂಗೂಲಿ (ಭಾರತ) -21 ಇನಿಂಗ್ಸ್
* ವಿವ್ ರಿಚರ್ಡ್ಸ್ (ವೆಸ್ಟ್ ಇಂಡೀಸ್) – 21 ಇನಿಂಗ್ಸ್
* ಮಾರ್ಕ್ ವಾ (ಆಸ್ಟ್ರೇಲಿಯಾ) -22 ಇನಿಂಗ್ಸ್
* ಹರ್ಷಲ್ ಗಿಬ್ಸ್ (ದಕ್ಷಿಣ ಆಫ್ರಿಕಾ) – 22 ಇನಿಂಗ್ಸ್
ಕ್ರಿಕೆಟ್ ದಿಗ್ಗಜರಾದ ಸಚಿನ್ ಹಾಗೂ ಡಿವಿಲಿಯರ್ಸ್ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ. ಎಬಿಡಿ ಹಾಗೂ ತೆಂಡೂಲ್ಕರ್ 20 ಇನಿಂಗ್ಸ್ ನಲ್ಲೇ ವೇಗವಾಗಿ 4 ಅಂಕಿಗಳನ್ನು ಪೂರೈಸಿದ್ದರು. ಈಗ ಆ ದಾಖಲೆಯನ್ನು ಡೇವಿಡ್ ವಾರ್ನರ್ ಹಿಂದಿಕ್ಕಿದ್ದಾರೆ.