ಅತ್ತೆ ಮನೆಯ ಮುಂದೆ ಒಬ್ಬಂಟಿಯಾಗಿ ಸೊಸೆ ಅಹೋರಾತ್ರಿ ಧರಣಿ

ಚಿಕ್ಕಬಳ್ಳಾಪುರ: ಅವರದ್ದು ಶ್ರೀಮಂತ ಕುಟುಂಬ ಪ್ರತಿಷ್ಠಿತ ಶಾಲೆಯೂ ಸಹ ಇದೆ. ಆದರೆ ಆ ಕುಟುಂಬದಲ್ಲಿ ಮಕ್ಕಳಾಗಲಿಲ್ಲ ಅನ್ನೋ ಕಾರಣಕ್ಕೆ ಸೊಸೆಯನ್ನೇ ಅತ್ತೆ ಮನೆಯಿಂದ ಹೊರಹಾಕಿದ್ದಾರಂತೆ. ಇದರಿಂದ ನೊಂದ ಪತ್ನಿ ತನಗೆ ಗಂಡ ಬೇಕು ಅತ್ತೆ ಮನೆಯಲ್ಲೇ ಸಂಸಾರ ಮಾಡಬೇಕು ಅಂತ ಆಹೋರಾತ್ರಿ ಮನೆ ಮುಂದೆ ಧರಣಿ ಕೂತು ಪ್ರತಿಭಟನೆ ನಡೆಸಿದ್ದಾಳೆ.

ಅಂದಹಾಗೆ ಜಬೀನ್ ತಾಜ್ ಹಾಗೂ ಚಿಕ್ಕಬಳ್ಳಾಪುರ (Chikkaballapur) ನಗರದ ಮುನಿಸಿಪಾಲ್ ಬಡಾವಣೆ ನಿವಾಸಿ ಮುಕ್ತಿಯಾರ್ ಅಹಮದ್ಗೆ ಮದುವೆಯಾಗಿ ಸರಿಸುಮಾರು 09 ವರ್ಷಗಳೇ ಕಳೆದಿವೆ. ಆದರೆ ಈ ದಂಪತಿಗೆ ಇದುವರೆಗೂ ಮಕ್ಕಳಾಗಿಲ್ಲ. ಆರಂಭದಲ್ಲಿ ಎಲ್ಲವೂ ಚೆನ್ನಾಗಿದ್ದ ಸಂಸಾರದಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಪದೇ ಪದೇ ಕೌಟುಂಬಿಕ ಕಲಹ ಸಮಸ್ಯೆಗಳು ಕಾಡತೊಡಗಿವೆ.

ಇಬ್ಬರ ನಡುವೆ ಸಣ್ಣ ಪುಟ್ಟ ವಿಷಯಕ್ಕೂ ಜಗಳ ಅಂತ ಹಲವು ಬಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದಕ್ಕೆ ಮೂಲ ಕಾರಣ ಮಕ್ಕಳಾಗಿಲ್ಲ ಅನ್ನೋದು ಆರೋಪ. ಹೀಗಾಗಿ ಮುಕ್ತಿಯಾರ್ ಅಹಮದ್ ತಾಯಿ ಜಬೀನ್ ತಾಜ್ ರ ಅತ್ತೆ ನ್ಯಾಮತಿ ಬೇಗಂ ಮಕ್ಕಳಾಗಲಿಲ್ಲ ಅಂತ ಸೊಸೆಯನ್ನ ತನ್ನ ಮನೆಯಲ್ಲಿ ಇಟ್ಟುಕೊಳ್ಳದೆ ಹೊರಗೆ ಹಾಕಿದ್ದಾಳಂತೆ. ಇದರಿಂದ ನೊಂದ ಜಬೀನ್ ತಾಜ್ ಅತ್ತೆಯ ಮನೆಯ ಎದುರೇ ಕೂತು ಆಹೋರಾತ್ರಿ ಪ್ರತಿಭಟನೆ ನಡೆಸಿದ್ದಾಳೆ.

Loading

Leave a Reply

Your email address will not be published. Required fields are marked *