ಬೆಂಗಳೂರು: ಯೋಜನೆ & ಸಾಂಖ್ಯಿಕ ಸಚಿವ ಡಿ.ಸುಧಾಕರ್ ವಂಚನೆ ಆರೋಪಕ್ಕೆ ಸಂಬಂಧಿಸಿ ಟ್ವೀಟ್ ಮೂಲಕ ಸಚಿವ ಡಿ.ಸುಧಾಕರ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಯಾವ ಪುಡಿರೌಡಿಗಿಂತ ಕಡಿಮೆ ಇಲ್ಲ ಡಿ.ಸುಧಾಕರ್ ಗೂಂಡಾವರ್ತನೆ. ಸಿದ್ದರಾಮಯ್ಯ ಸಂಪುಟದಲ್ಲಿ ಜಾತಿ ನಿಂದಕರು, ಗೂಂಡಾಗಳೇ ಇದ್ದಾರೆ. ಸಿದ್ದರಾಮಯ್ಯಗೆ ದಲಿತರನ್ನು ಮೂಲೆಗುಂಪು ಮಾಡುವುದು ಕರಗತವಾದರೆ. ಡಿ.ಸುಧಾಕರ್ʼಗೆ ದಲಿತರನ್ನು ಅವಮಾನಿಸಿ ಗೂಂಡಾಗಿರಿ ಮಾಡುವ ಅಹಂ. ಸರ್ಕಾರ ಕೂಡಲೇ ಗೂಂಡಾ ಸಚಿವರ ಬಂಧಿಸಿ ರಾಜೀನಾಮೆ ಪಡೆಯಲಿ ಎಂದು ಟ್ವಿಟರ್ ಮೂಲಕ ರಾಜ್ಯ ಸರ್ಕಾರಕ್ಕೆ ರಾಜ್ಯ ಬಿಜೆಪಿ ಆಗ್ರಹಿಸಿದೆ.