ಡಿ.ಕೆ. ಶಿವಕುಮಾರ್ ಏನೇ ಮಾಡಿದರೂ ಮೊದಲು ಬ್ಯುಸಿನೆಸ್ ಇರುತ್ತದೆ: ಆರ್ ಅಶೋಕ್

ಬೆಂಗಳೂರು: ಕನಕಪುರವನ್ನು ಬೆಂಗಳೂರಿಗೆ ಸೇರ್ಪಡೆ ಕುರಿತ ಡಿಸಿಎಂ ಹೇಳಿಕೆ ಸಂಬಂಧಿಸಿದಂತೆ  ಡಿ.ಕೆ. ಶಿವಕುಮಾರ್ ಏನೇ ಮಾಡಿದರೂ ಮೊದಲು ಬ್ಯುಸಿನೆಸ್ ಇರುತ್ತದೆ, ನಂತರ ಹವ್ಯಾಸ ಇರುತ್ತದೆ. ಫ್ರೀ ಘೋಷಣೆ ಮಾಡಿದ್ದು ಕೊಡಲು ಇವರ ಹತ್ತಿರ ಕಾಸಿಲ್ಲ. ಇನ್ನು ಬ್ರ್ಯಾಂಡ್​ ಬೆಂಗಳೂರು ಹೇಗೆ ಮಾಡುತ್ತೀರಾ? ಫೋಟೋ ತೆಗೆದುಕೊಳ್ಳೋದು ಅಷ್ಟೇ ಬ್ಯ್ರಾಂಡ್​ ಬೆಂಗಳೂರು ಆಗಿದೆ. ಬೆಂಗಳೂರಿನ ಜನ ನೆಮ್ಮದಿಯಾಗಿ ಇರಲು ಬಿಡಿ.

ನಿಮಗೆ ಬಹಳ ಪ್ರೀತಿ ಇದ್ದರೆ ಕನಕಪುರವನ್ನೇ ಒಂದು ಜಿಲ್ಲೆ ಮಾಡಿಬಿಡಿ. ಡಿ.ಕೆ. ಶಿವಕುಮಾರ್ ಮತ್ತು ಕುಮಾರಸ್ವಾಮಿ ಜಗಳದಲ್ಲಿ ಬೆಂಗಳೂರು ಬಡವಾಗಿದೆ. ರಾಮನಗರ ಜಿಲ್ಲೆ ಮಾಡಿದಾಗ ಡಿಕೆ ಶಿವಕುಮಾರ್ ಶಾಸಕರಾಗಿದ್ದರು. ಆಗ ಯಾಕೆ ಪ್ರತಿಭಟನೆ ಮಾಡಲಿಲ್ಲ? ಹೇಗೂ ರಾಮನಗರದಿಂದ ಮೆಡಿಕಲ್ ಕಾಲೇಜು ತೆಗೆದುಕೊಂಡು ಹೋಗಿದ್ದೀರಾ, ಕನಕಪುರವನ್ನೇ ಜಿಲ್ಲೆ ಮಾಡಿಬಿಡಿ ಎಂದು ಶಾಸಕ ಆರ್​ ಅಶೋಕ ಹೇಳಿದರು.

Loading

Leave a Reply

Your email address will not be published. Required fields are marked *