Cyclone Biparjoy: ದ್ವಾರಕಾದಲ್ಲಿರುವ ದ್ವಾರಕಾಧೀಶ ದೇವಾಲಯ ಬಂದ್

ದ್ವಾರಕಾ: ಬಿಪರ್ಜೋಯ್ ಜೂನ್ 15ರ ಸಂಜೆ ಗುಜರಾತ್ನ ಜಖೌ ಕರಾವಳಿಯ ಬಳಿ ಭೂಕುಸಿತ ಉಂಟು ಮಾಡುವ ಸಾಧ್ಯತೆ ಇದೆ. ದಕ್ಷಿಣ ಭಾಗ ಅನೇಕ ಕಡೆ ಇದು ಅಪ್ಪಳಿಸಲಿದೆ ಎಂದು ಹೇಳಲಾಗಿದೆ.ಆದ್ದರಿಂದ ಗುಜರಾತ್ನ ಕರಾವಳಿ ಪ್ರದೇಶವನ್ನು ಸಮೀಪಿಸುತ್ತಿದ್ದಂತೆ, ದೇವಭೂಮಿ ದ್ವಾರಕಾದಲ್ಲಿರುವ ದ್ವಾರಕಾಧೀಶ ದೇವಾಲಯವನ್ನು ಗುರುವಾರ ಮುಚ್ಚಲಾಗಿದೆ. ದ್ವಾರಕಾಧೀಶ್ ದೇವಾಲಯದ ಜೊತೆಗೆ ದ್ವಾರಕಾ ಬಜಾರ್ ಕೂಡ ಮುಚ್ಚಲಾಗಿದೆ. ಆದರೆ, ದೇವಸ್ಥಾನದ ಪ್ರತಿದಿನ ನಡೆಯುವ ಪೂಜೆ ಯಥಾಸ್ಥಿತಿಯಾಗಿ ಮುಂದುವರಿಯಲಿದೆ. ಬೆಳಗಿನ ಪೂಜೆ, ಭೋಗ್ ಮತ್ತು ಆರತಿ ಇರುತ್ತದೆ. ದ್ವಾರಕಾಧೀಶ ದೇವಾಲಯದ ಅಧಿಕೃತ ವೆಬ್ಸೈಟ್ ಮೂಲಕ ನೇರ ದರ್ಶನವನ್ನು ಪಡೆಯಬಹುದು ಎಂದು ದ್ವಾರಕಾಧೀಶ ದೇವಾಲಯದ ಅರ್ಚಕ ಮಲಯ್ ಪಾಂಡ್ಯ ತಿಳಿಸಿದ್ದಾರೆ.
ಬಿಪರ್ಜೋಯ್ ಜೂನ್ 15ರ ಸಂಜೆ ಗುಜರಾತ್ನ ಜಖೌ ಕರಾವಳಿಯ ಬಳಿ ಭೂಕುಸಿತ ಉಂಟು ಮಾಡುವ ಸಾಧ್ಯತೆ ಇದೆ. ದಕ್ಷಿಣ ಭಾಗ ಅನೇಕ ಕಡೆ ಇದು ಅಪ್ಪಳಿಸಲಿದೆ ಎಂದು ಹೇಳಲಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ವಿಎಸ್ಸಿಎಸ್ (ಅತಿ ತೀವ್ರ ಚಂಡಮಾರುತ) ಬಿಪರ್ಜೋಯ್ ಇಂದು ಸಂಜೆಯ ವೇಳೆಗೆ ಸೌರಾಷ್ಟ್ರ, ಕಚ್ ಮತ್ತು ಪಕ್ಕದ ಪಾಕಿಸ್ತಾನದ ಕರಾವಳಿಯನ್ನು ಮಾಂಡ್ವಿ ಮತ್ತು ಕರಾಚಿ ನಡುವೆ ಜಖೌ ಬಂದರಿಗಳಿಗೂ ಅಪ್ಪಳಿಸಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

Loading

Leave a Reply

Your email address will not be published. Required fields are marked *