ಹಾವೇರಿ: ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ನೆಪದಲ್ಲಿ ರೈತರನ್ನ ಕಡೆಗಣಿಸಿದೆ, ರಾಜ್ಯದಲ್ಲಿ ರೈತರು ಆತ್ಮಹತ್ಯೆ ಹೆಚ್ಚಾಗಿದೆ ಇದರ ಬಗ್ಗೆ ತಲೆ ಕೆಡಸಿಕೊಳ್ತಾ ಇಲ್ಲಾ ಎಂದು ಹಾವೇರಿ ಜಿಲ್ಲೆ ಹಿರೆಕೇರೂರಿನ ತಹಶೀಲ್ದಾರ್ ಕಚೇರಿಯಲ್ಲಿ ಮಾಜಿ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ. ಈ ಹಿಂದೆ ಸಿದ್ದರಾಮಯ್ಯನವರು ಇದ್ದಾಗ ಅತಿ ಹೆಚ್ಚು ರೈತ ಆತ್ಮಹತ್ಯೆಗಳು ಆಗಿದ್ದವು, ಈ ವರ್ಷವೂ ಕೂಡಾ ರೈತರ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚಾಗಿವೆ ಎಂದರು. ಈ ಸರ್ಕಾರ ಬೆಳೆವಿಮೆ ಬಗ್ಗೆ ಕಾಳಜಿ ವಹಿಸುತ್ತಿಲ್ಲಾ, ಲೋಡ್ ಶೆಡ್ಡಿಂಗ್ ಮಾಡಿ ರೈತರಿಗೆ ಸಮರ್ಪಕ ವಿದ್ಯುತ್ ಕೊಡ್ತಾ ಇಲ್ಲಾ, ತಾಲೂಕಿನ ಕೆರಗಳಿಗೆ ನೀರು ತುಂಬಿಸೋಕೆ ಆಗ್ತಾ ಇಲ್ಲಾ, ಕಾರಣ ಕರೆಂಟ್ ಬಿಲ್ ಕಟ್ಟೋಕೆ ಇವರ ಬಳಿ ದುಡ್ಡು ಇಲ್ಲಾ ಆದ್ದರಿಂದ ಜನರಿಗೆ ಬಿಜೆಪಿ ಯೋಜನೆಗಳನ್ನ ತಲುಪಿಸುವಲ್ಲಿ ಈಗಿನ ಶಾಸಕರು ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.
ಇನ್ನೂ ಸಚಿವ ಶಿವಾನಂದ ಪಾಟೀಲ್ ವಿವಾದಾತ್ಮಕ ಹೇಳಿಕೆಗೆ ಗರಂ ಆಗಿದ್ದು, ಪರಿಹಾರ ಹಣ ಹೆಚ್ಚಾಗಿದ್ದಕ್ಕೆ ಆತ್ಮಹತ್ಯೆ ಅಂತಾ ಹೇಳ್ತಾರೆ, ಯಾರು ಹಣ ಸಿಗುತ್ತದೆ ಅಂತಾ ಆತ್ಮಹತ್ಯೆ ಮಾಡಿಕೊಳ್ಳೊಲ್ಲಾ.. ನಾವೇಲ್ಲರೂ ಸೇರಿ 1 ಕೋಟಿ ಕೊಡ್ತೇವಿ ಶಿವಾನಂದ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ತಾರಾ..? ಆತ್ಮಹತ್ಯೆ ಮಾಡಿಕೊಂಡರೆ ರೈತರಿಗೆ ಉತ್ತರ ಕೊಟ್ಟಂಗೆ ಆಗುತ್ತದೆ. ಇದು ರೈತರಿಗೆ ಮಾಡಿದ ದೊಡ್ಡ ಅಪಮಾನ ಆದ್ದರಿಂದ ಸಚಿವ ಸಚಿಸ್ಥಾನಕ್ಕೆ ಅವ್ರು ರಾಜೀನಾಮೆ ಕೊಡಬೇಕು ಎಂದು ಹೇಳಿದರು.