ಚಿಕ್ಕಮಗಳೂರು: ರಾಜಕಾರಣದಲ್ಲಿ ಮಾಸ್ಟರ್ ಮೈಂಡ್ ಉಗ್ರ ಇದ್ದರೆ ಅದು ಸಿ.ಟಿ.ರವಿ ಎಂದು ಹೇಳುವ ಮೂಲಕ ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ಅವರು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಕುಕ್ಕರ್ ಬಾಂಬ್ ಸ್ಫೋಟ ಉಗ್ರ ಶಾರಿಕ್ಗಿಂತ ಸಿ.ಟಿ.ರವಿ ಒಂದು ಕೈಮೇಲು. ರಾಜಕೀಯದಲ್ಲಿ ಸಿ.ಟಿ.ರವಿ ಹಲವರನ್ನು ಬಲಿ ಕೊಟ್ಟಿದ್ದಾರೆ. ಘೋರಿ, ದರ್ಗಾಗಳನ್ನು ಸಂಚಿನಲ್ಲಿ ಧ್ವಂಸ ಮಾಡಿಸಿದ್ದರೆ ಅದು ಸಿ.ಟಿ.ರವಿ. ಮಹೇಂದ್ರ ಕುಮಾರ್ ಬಳಸಿಕೊಂಡು ದರ್ಗಾ, ದೇಗುಲ ದ್ವಂಸ ಮಾಡಿದ್ದರು. ಮಾಜಿ ಶಾಸಕ ಸಿ.ಟಿ.ರವಿ ಪದೇ ಪದೆ ತಮ್ಮ ನಾಲಿಗೆ ಹರಿಬಿಡುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯರನ್ನು ಸಿದ್ರಾಮುಲ್ಲಾ ಖಾನ್ ಎಂದು ಹೇಳಿದ್ದರು. ಈಗ ಡಿಸಿಎಂ ಡಿಕೆ ಶಿವಕುಮಾರ್ ಹೆಸರಿಗೆ ಕೊತ್ವಾಲ್ ಹೆಸರನ್ನು ಸೇರಿಸಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದ ಜನ ಸಿ.ಟಿ.ರವಿರನ್ನು ಮನೆಗೆ ಕಳುಹಿಸಿದ್ದಾರೆ. ಉಗ್ರ ಸಿ.ಟಿ.ರವಿಯನ್ನು ಗಡಿಪಾರು ಮಾಡಬೇಕೆಂದು ಒತ್ತಾಯ ಮಾಡುತ್ತೇನೆ ಎಂದರು.