ನವದೆಹಲಿ: ಬೆಂಗಳೂರಿನಲ್ಲಿ ವಿಪಕ್ಷಗಳ ಮಹಾಮೈತ್ರಿಕೂಟ ಸಭೆ ವಿಚಾರಕ್ಕೆ ಸಂಬಂಧಿಸಿ ದೇಶದ ಸಮಗ್ರ ಅಭಿವೃದ್ಧಿಯಷ್ಟೇ ನಮ್ಮ ಸರ್ಕಾರದ ಗುರಿ. ಬೇರೆ ಪಕ್ಷಗಳಿಗೆ ಅವರ ಕುಟುಂಬಗಳ ಅಭಿವೃದ್ಧಿಯಷ್ಟೇ ಮುಖ್ಯ ಎಂದು ವಿಪಕ್ಷಗಳ ಸಭೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ವಿಪಕ್ಷಗಳಿಗೆ ದೇಶ ಮುಖ್ಯ ಅಲ್ಲ, ಅವರ ಕುಟುಂಬ ಅಭಿವೃದ್ಧಿ ಮುಖ್ಯ. ವಾಮಮಾರ್ಗದಲ್ಲಿ ಹಣ ಗಳಿಸುವುದು, ಕುಟುಂಬ ವೃದ್ಧಿಯೇ ಮುಖ್ಯ. ಭ್ರಷ್ಟಾಚಾರದ ಗ್ಯಾರಂಟಿಯೇ ವಿಪಕ್ಷಗಳ ಸಭೆಯ ಮುಖ್ಯ ಅಜೆಂಡಾ. ಕೆಲ ಪಕ್ಷಗಳ ಕುಟುಂಬದ ಸದಸ್ಯರು ಈಗಾಗಲೇ ಬೇಲ್ನಲ್ಲಿದ್ದಾರೆ ಎಂದು ಸೋನಿಯಾ, ರಾಹುಲ್ ವಿರುದ್ಧ ಪ್ರಧಾನಿ ಮೋದಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು