IPL ಮಿನಿ ಹರಾಜಿಗೆ ಕ್ಷಣಗಣನೆ: ಈ 5 ಟಾಪ್ ಆಟಗಾರರು ಯಾರ ಪಾಲಾಗಲಿದ್ದಾರೆ!?

ಐಪಿಎಲ್​ 2024ರ ಆಟಗಾರ ಮಿನಿ ಹರಾಜಿನ ಮೇಲೆ ಅಭಿಮಾನಿಗಳ ಚಿತ್ತ ನೆಟ್ಟಿದೆ. 10 ತಂಡಗಳ ಅಭಿಮಾನಿಗಳು ತಮ್ಮ ತಂಡಕ್ಕೆ ಯಾವ ಆಟಗಾರು ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಕುತೂಹಲದಲ್ಲಿದ್ದಾರೆ. ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಭಾರತದ ವಿಶ್ವಕಪ್​ ಟ್ರೋಫಿ ಕನಸನ್ನು ಭಗ್ನ ಗೊಳಿಸಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರಿಗೆ ಈ ಬಾರಿಯ ಹರಾಜಿನಲ್ಲಿ ಭಾರಿ ಮೊತ್ತ ಸಿಗುವ ನಿರೀಕ್ಷೆ ಇದೆ. ಈಗಾಗಕೇ ಅವರನ್ನು ಆಕ್ಷನ್​ನಲ್ಲಿ 20 ಕೋಟಿ ರೂ. ನೀಡಿಯಾದರೂ ಖರೀದಿಸಲು ಕೆಲವು ಫ್ರಾಂಚೈಸಿ ಮುಂದಾಗಿದೆ ಎಂದು ವರದಿಯಾಗಿದೆ

50 ಲಕ್ಷ ಮೂಲಬೆಲೆ ಹೊಂದಿರುವ ನ್ಯೂಜಿಲ್ಯಾಂಡ್​ನ ಯುವ ಆಟಗಾರ ರಚಿನ್​ ರವೀಂದ್ರ ಅವರಿಗೂ ಭಾರಿ ಮೊತ್ತ ಸಿಗುವ ಸಾಧ್ಯತೆ ಇದೆ. ಈ ಬಾರಿಯ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಚೊಚ್ಚಲ ಬಾರಿ ಕಣಕ್ಕಿಳಿದರೂ, ಶ್ರೇಷ್ಠ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ಟೂರ್ನಿಯಲ್ಲಿ ಅತ್ಯಧಿಕ ರನ್​ ಸಾಧಕರ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದರು. ವಿಶ್ವಕಪ್​ನಲ್ಲಿ ಅವರು 578 ರನ್​ ಬಾರಿಸಿದ್ದರು. ಎಲ್ಲ ಫ್ರಾಂಚೈಸಿಗಳು ಇವರ ಮೇಲೆ ಕಣ್ಣಿಟ್ಟಿದೆ.

ನ್ಯೂಜಿಲ್ಯಾಂಡ್​ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ಮತ್ತು ಆಲ್​ರೌಂಡರ್​ ಆಗಿರುವ ಡ್ಯಾರಿಲ್​ ಮಿಚೆಲ್​ ಅವರಿಗೂ ದೊಡ್ಡ ಮೊತ್ತ ಸಿಗುವ ನಿರೀಕ್ಷೆ ಇದೆ. ಯಾವುದೇ ಹಂತದಲ್ಲಿಯೂ ತಂಡಕ್ಕೆ ಆಸರೆಯಾಗಿ ನಿಂತು ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಇವರಿಗಿದೆ. ಈಗಾಗಲೇ 2 ಕೋಟಿ ರೂ. ಮೂಲಬೆಲೆ ಹೊಂದಿರುವ ದಕ್ಷಿಣ ಆಫ್ರಿಕಾ ತಂಡದ ಯುವ ವೇಗಿ ಮತ್ತು ಬ್ಯಾಟಿಂಗ್​ ಆಲ್​ರೌಂಡರ್​ ಆಗಿರುವ ಜೆರಾಲ್ಡ್ ಕೋಟ್ಜಿ ಅವರಿಗೆ ಈ ಬಾರಿ ಐಪಿಎಲ್​ನಲ್ಲಿ ಅದೃಷ್ಟ ಖಲಾಯಿಸುವ ಸಾಧ್ಯತೆ ಇದೆ.

ಕೆಲ ಕಾಲ ಐಪಿಎಲ್​ ಆಡಿ ಆ ಬಳಿಕ ಗಾಯದ ಸಮಸ್ಯೆ ಮತ್ತು ಕೊರೊನಾ ಜೈವಿಕ ಸುರಕ್ಷತಾ ವಲಯದಲ್ಲಿ ಆಡಲು ನಿರಾಕರಿಸಿ ಐಪಿಎಲ್​ನಿಂದ ದೂರ ಉಳಿದಿದ್ದ ಆಸ್ಟ್ರೇಲಿಯಾದ ಸ್ಟಾರ್​ ವೇಗಿ ಮಿಚೆಲ್​ ಸ್ಟಾಕ್​ ಅವರು ಈ ಬಾರಿಯ ಆಟಗಾರರ ಹಾರಜಿಗೆ ಹೆಸರು ನೊಂದಾಯಿಸಿದ್ದಾರೆ. ಎಂಟು ವರ್ಷಗಳ ಬಳಿಕ ಮತ್ತೆ ಐಪಿಎಲ್‌ ಟೂರ್ನಿಗೆ ಮರಳುವ ಕಾತರದಲ್ಲಿದ್ದಾರೆ

ಕೆಲ ಕಾಲ ಐಪಿಎಲ್​ ಆಡಿ ಆ ಬಳಿಕ ಗಾಯದ ಸಮಸ್ಯೆ ಮತ್ತು ಕೊರೊನಾ ಜೈವಿಕ ಸುರಕ್ಷತಾ ವಲಯದಲ್ಲಿ ಆಡಲು ನಿರಾಕರಿಸಿ ಐಪಿಎಲ್​ನಿಂದ ದೂರ ಉಳಿದಿದ್ದ ಆಸ್ಟ್ರೇಲಿಯಾದ ಸ್ಟಾರ್​ ವೇಗಿ ಮಿಚೆಲ್​ ಸ್ಟಾಕ್​ ಅವರು ಈ ಬಾರಿಯ ಆಟಗಾರರ ಹಾರಜಿಗೆ ಹೆಸರು ನೊಂದಾಯಿಸಿದ್ದಾರೆ. ಎಂಟು ವರ್ಷಗಳ ಬಳಿಕ ಮತ್ತೆ ಐಪಿಎಲ್‌ ಟೂರ್ನಿಗೆ ಮರಳುವ ಕಾತರದಲ್ಲಿದ್ದಾರೆ

Loading

Leave a Reply

Your email address will not be published. Required fields are marked *