ಆಂಧ್ರ;- ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಾಮೀನು ರಹಿತ ಸೆಕ್ಷನ್ ಅನ್ನು ಸಮರ್ಥನೀಯವಲ್ಲ ಎಂದು ಕರೆದ ನ್ಯಾಯಾಧೀಶರು ಈ ಹಿಂದೆ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದರು. ಕೌಶಲ್ಯ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ಶನಿವಾರ ಬಂಧಿಸಿತ್ತು.
ಟಿಡಿಪಿ ಮುಖ್ಯಸ್ಥರ ತಂಡವು ಎನ್ ಚಂದ್ರಬಾಬು ನಾಯ್ಡು ವಿರುದ್ಧ ಯಾವುದೇ ಜಾಮೀನು ರಹಿತ ವಾರಂಟ್ ಇಲ್ಲ ಎಂದು ಹೇಳಿಕೊಂಡಿದ್ದು, ಬಂಧನ ಅಕ್ರಮವಾಗಿದೆ ಆರೋಪಿಸಿತ್ತು. ಚಂದ್ರಬಾಬು ನಾಯ್ಡು ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) 34 ಮತ್ತು 37 ಜೊತೆಗೆ ಸೆಕ್ಷನ್ 120(b), 166, 167, 418, 420, 465, 468, 201, ಮತ್ತು 109 ಅಡಿಯಲ್ಲಿ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ. ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ 1988 ರ ಅಡಿಯಲ್ಲಿ ಆರೋಪವನ್ನೂ ಹೊರಿಸಲಾಗಿದೆ.