ಕೊತ್ತಂಬರಿ ಸೊಪ್ಪುಗೆ ಸೂಕ್ತ ಬೆಲೆ ಸಿಗದ ಕಾರಣ ರೈತರು ಕಟಾವು ಮಾಡದೆ ಬೀಡು ಬಿಟ್ಟಿರುವ ಘಟನೆ ಕರ್ನಾಟಕ ಮತ್ತು ತಮಿಳುನಾಡು ಗಡಿಭಾಗದ ಹೊಸೂರು ನಲ್ಲಿ ನಡೆದಿದೆ .ಇನ್ನು ಒಂದು ಕಟ್ಟು ಕೊತಂಬರಿ ಸೊಪ್ಪುಗೆ ಒಂದು ರೂಪಾಯಿ ಮಾರಾಟ ಆದಕಾರಣ ಇದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸಿದದ್ದಾರೆ.. 259 ತೋಟದಲ್ಲಿ ಬೆಳೆದಿರುವ ಬೆಳೆಯನ್ನ ಕಿತ್ತು ಮಾರುಕಟ್ಟೆ ಹಾಕಲು ಅದಕ್ಕೆ ತಗಲುವ ವೆಚ್ಚ ಸಹ ಸಿಗುತ್ತಿಲ್ಲ ಅಂತ ಪರದಾಡುತ್ತಿದ್ದಾರೆ ಇದರಿಂದ ರೈತರು ಬೆಳೆಯನ್ನ ಕೀಳದೆ ಹಾಗೆ ಬೀಡು ಬಿಟ್ಟಿದ್ದಾರೆ ಇನ್ನು ಕೆಲವರು ಅದನ್ನ ಕಿತ್ತು ಜಾನುವಾರಗಳಿಗೆ ಹಾಕುತ್ತಿದ್ದಾರೆ.
ಇನ್ನು ಇದಕ್ಕೆ ಪ್ರಮುಖ ಕಾರಣ ಈ ಹಿಂದೆ ಸಾಕಷ್ಟು ಬೇಡಿಕೆಯಿಂದ ಕೊತ್ಮೀರಿ ಸೊಪ್ಪನ್ನು ಎಲ್ಲಾ ರೈತರು ಇದೇ ಬೆಳೆಯನ್ನ ಬೆಳೆದಿದ್ದಕ್ಕೆ ಮಾರುಕಟ್ಟೆಯಲ್ಲಿ ಡಿಮ್ಯಾಂಡ್ ಕಡಿಮೆಯಾಗಿದೆ..ಇನ್ನು ಒಂದು ಎಕರೆ ಕೊತ್ತಂಬರಿ ಸೊಪ್ಪು ಬೆಳೆಯಲು 15ಸಾವಿರ ಬೇಕಾಗಿದ್ದು40 ದಿನಗಳು ಬೆಳೆಯನ್ನು ಬೆಳೆಯಲು ಸಮಯ ಬೇಕಾಗುತ್ತದೆ.. ಇನ್ನು ಕೊತ್ತಂಬರಿ ಸೊಪ್ಪನ್ನ ತೋಟದಲ್ಲಿ ಖರೀದಿಸಲು ಆಂಧ್ರ ,ತಮಿಳ್ ನಾಡು ಕೇರಳ ಸೇರಿದಂತೆ ಅನೇಕ ಭಾಗಗಳಿಗೆ ಬಂದು ಖರೀದಿ ಮಾಡುತ್ತಿದ್ದರು ಆದರೆ ಈ ಬಾರಿ ಮಾರಾಟಗಾರರು ಕೂಡ ಕೈ ಚೆಲ್ಲಿದ್ದಾರೆ ಇದರಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ.