ಬೆಂಗಳೂರು:- ಸಿಲಿಕಾನ್ ಸಿಟಿಯಲ್ಲಿ ಪುಂಡರ ಅಟ್ಟಹಾಸ ಮುಂದುವರಿದಿದೆ. ಮಾರಾಕಾಸ್ತ್ರ ಹಿಡಿದು ಅಡ್ಡಾಡಿ ಪ್ರಾಣ ಬೆದರಿಕೆ ಹೊಡ್ಡಿದ್ದಾರೆ. ದೂರು ಕೊಟ್ರು ಪೊಲೀಸ್ರಿಂದ ಯಾವೂದೇ ಕ್ರಮ ಇಲ್ವಂತೆ..!?ಸಿಸಿಟಿವಿಯಲ್ಲಿ ಪುಂಡರ ಗುಂಡಾವರ್ತನೆ ಸೆರೆಯಾಗಿದೆ.
ಲಾಂಗ್ ಹಿಡಿದು ಲಾಂಗ್ ಬೀಸಿದ್ದಾರೆಂದು ಮಹಿಳೆ ಆರೋಪ ಮಾಡಿದ್ದಾರೆ.
ನಾಲ್ಕೈದು ಪುಂಡರು ಲಾಂಗ್ ಹಿಡಿದು ಬಂದು
ಪಾಟರಿ ರಸ್ತೆಯ ಗಾಂಧಿ ಗ್ರಾಮದ ಅಮಲು ಅನ್ನೋರ ಮೇಲೆ ಲಾಂಗ್ ಬೀಸಿದ್ರಂತೆ. ಕಳೆದ 25 ನೇ ತಾರೀಖು ಘಟನೆ ಜರುಗಿದೆ.
ಅನಿತಾ ಎಂಬ ಮಹಿಳೆ ಅಮಲು ಅನ್ನೋ ಮಹಿಳೆಗೆ ಬಡ್ಡಿಗೆ ದುಡ್ಡು ಕೊಟ್ಟಿದ್ದರು. ಈ ವಿಚಾರವಾಗಿ ಈ ಹಿಂದೆ ಗಲಾಟೆಯಾಗಿ ಅನಿತಾ ವಿರುದ್ಧ ಅಮಲು ದೂರು ಕೊಟ್ಟಿದ್ದಾರೆ. ಇದೇ ಜಿದ್ದು ತೀರಿಸಿಕೊಳ್ಳಲು ಏಕಾಏಕಿ ಅಮಲು ಮನೆ ಬಳಿ ಬಂದು ಲಾಗ್ ಬೀಸಿದ್ದಾರೆ. ಅನಿತಾ ಅಕ್ಕನ ಮೇಲೆ ಕಂಪ್ಲೈಂಟ್ ಕೊಡ್ತಿಯಾ ಅಂತ ಹಲ್ಲೆಗೆ ಯತ್ನಿಸಿದ್ರಂತೆ. ಜೆಸಿ ನಗರ ಠಾಣೆಗೆ ದೂರು ನೀಡಿದ್ರು ಯಾವೂದೇ ಕ್ರಮ ಕೈಗೊಂಡಿಲ್ಲ ಅಂತ ಮಹಿಳೆ ಆರೋಪ ಮಾಡಿದ್ದಾರೆ.