ತುಮಕೂರು: ತುಮಕೂರು ಜಿಲ್ಲೆಯಲ್ಲಿ ಗೊಲ್ಲ ಸಮುದಾಯದ ಮೈಲಿಗೆ ಸಂಪ್ರದಾಯ ನಿಲ್ಲುವಂತೆ ಕಾಣಿಸುತ್ತಿಲ್ . ಊರಾಚೆ ಇರಿಸಿ ನವಜಾತ ಶಿಶು ಸಾವನ್ನಪ್ಪಿದರೂ ಕೂಡ ಈ ಸಮುದಾಯ ಇನ್ನೂ ಎಚ್ಚೆತ್ತುಕೊಂಡಿಲ್ಲ. ಮತ್ತೆ ತುಮಕೂರಲ್ಲಿ ಗೊಲ್ಲ ಸಮುದಾಯದಿಂದ ಮೌಡ್ಯಾಚರಣೆ ಮುಂದುವರೆದಿದೆ. ಒಂದು ತಿಂಗಳ ಹಸುಗೂಸು ಹಾಗೂ ಬಾಣಂತಿಯನ್ನ ಊರಾಚೆ ಇರಿಸಿದ್ದ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕುಂಟನಹಟ್ಟಿ ಗೊಲ್ಲರಹಟ್ಟಿಯಲ್ಲಿ ನಡೆದಿದೆ. ಬಾಲಮ್ಮ 25 ವರ್ಷದ ಬಾಣಂತಿ ಹಾಗೂ ಒಂದು ತಿಂಗಳ ಮಗುವನ್ನ ಗ್ರಾಮಸ್ಥರು ಗ್ರಾಮದ ಹೊರಗಿಟ್ಟಿದ್ದರು. ವಿಷಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಶಿರಾ ಜೆಎಮ್ ಎಫ್ ಸಿ ನ್ಯಾಯಾಧೀಶರಾದ ಗೀತಾಂಜಲಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ರೀತಿಯ ಮೌಡ್ಯಾಚರಣೆ ನೆಪದಲ್ಲಿ ಶೋಷಣೆ ಮಾಡಿದರೆ ಕಾನೂನು ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಬಳಿಕ ಬಾಣಂತಿ ಮಗುವನ್ನ ನ್ಯಾಯಾಧೀಶರು ಮನೆ ಸೇರಿಸಿದರು.